ಸೂರತ್‌ನಲ್ಲಿ ಇರಿಸಲಾಗಿದ್ದ ಬಾಂಬ್‌ಗಳ ಹಿಂದೆಯೂ, ಅಹಮದಾಬಾದ್ ಬಾಂಬ್ ಸ್ಫೋಟದ ರೂವಾರಿ ಅಬು ಬಶೀರ್ ಕೈವಾಡವಿದೆ ಎಂಬ ಅಂಶವನ್ನು ಗುಜರಾತ್ ಪೊಲೀಸರು ಹೊರಗೆಡಹಿದ್ದಾರೆ.
ಸೂರತ್‌ನಲ್ಲಿ ಪತ್ತೆಯಾಗಿದ್ದ 20ಕ್ಕೂ ಅಧಿಕ ಸಜೀವ ಬಾಂಬ್ ಇರಿಸಿದ್ದ ಸಂಚನ್ನು ಬಯಲು ಮಾಡಿರುವುದಾಗಿ ಹೇಳಿರುವ ಗುಜರಾತ್ ಡಿಜಿಪಿ ಪಿ.ಸಿ.ಪಾಂಡೆ, ಅಹಮದಾಬಾದ್ ಬಾಂಬ್ ಸ್ಫೋಟ ಮತ್ತು ಸೂರತ್‌ನಲ್ಲಿ ಪತ್ತೆಯಾಗಿರುವ ಸಜೀವ ಬಾಂಬ್‌ಗಳ ವಿಚಾರದಲ್ಲಿ ನೇರ ಸಂಪರ್ಕವಿದೆ ಎಂದು ಹೇಳಿದ್ದಾರೆ. ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಹಲವು ರಾಜ್ಯಗಳ ಕಾನೂನು ಮತ್ತು ಸುವ್ಯವಸ್ಥೆ ಸಂಸ್ಥೆಗಳು ನೀಡಿರುವ ಬೆಂಬಲವನ್ನು ಪ್ರಸ್ತಾಪಿಸಿದ ಪಾಂಡೆ, ಅಹಮದಾಬಾದ್ ಮತ್ತು ಸೂರತ್ ಬಾಂಬ್ ಸ್ಫೋಟಗಳಿಗೆ ಸ್ಪಷ್ಟ ಸಂಪರ್ಕ ಇದೆ ಎಂಬುದಕ್ಕೆ ರಚನಾತ್ಮಕ ಪುರಾವೆಗಳಿವೆ ಅವರು ನುಡಿದರು.
ಉಭಯ ನಗರಗಳಲ್ಲಿ ಬಾಂಬ್ ಇರಿಸಲಾಗಿರುವ ಕಾರ್ಯವಿಧಾನಗಳನ್ನು ವಿವರಿಸಿದ ಅವರು, ಇವುಗಳಲ್ಲಿ ಇರುವ ಒಂದೇ ಒಂದು ಭಿನ್ನತೆ ಎಂದರೆ, ಅಹಮದಾಬಾದ್ ಬಾಂಬ್ ಸ್ಫೋಟಗೊಂಡಿದ್ದರೆ, ಸೂರತ್‌ನಲ್ಲಿ ಇರಿಸಲಾಗಿರುವ ಬಾಂಬ್‌ಗಳು ಸ್ಫೋಟಗೊಂಡಿಲ್ಲ ಎಂದು ನುಡಿದರು.
ಸೂರತ್‌ನಲ್ಲಿ ಪತ್ತೆಯಾಗಿರುವ ಬಾಂಬ್‌ಗಳೂ ಹೆಚ್ಚು ಸಾಂದ್ರತೆಯದ್ದಾಗಿದ್ದು, ಒಂದೊಮ್ಮೆ ಸ್ಫೋಟಗೊಳ್ಳುತ್ತಿದ್ದರೆ, ಮತ್ತೊಂದು ಮಾರಣಹೋಮ ನಡೆಯುತ್ತಿತ್ತು ಎಂದು ತಿಳಿಸಿದರು.
ಅಹಮದಾಬಾದ್ ಸ್ಫೋಟಕ್ಕೆ ಬಳಸಿರುವಂತಹುದೆ ಸರ್ಕ್ಯೂಟ್ ಮತ್ತು ಚಿಪ್‌ಗಳನ್ನು ಸೂರತ್ ಸ್ಫೋಟಕ್ಕೂ ಬಳಸಲಾಗಿದೆ ಎಂದು ಪಾಂಡೆ ನುಡಿದರು.
|