ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸ್ಫೋಟ ಆರೋಪಿ ಪರ ವಾದಿಸಲು ರಾಜಸ್ಥಾನ ವಕೀಲರ ನಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಫೋಟ ಆರೋಪಿ ಪರ ವಾದಿಸಲು ರಾಜಸ್ಥಾನ ವಕೀಲರ ನಕಾರ
ಜೈಪುರ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಗಳ ಪರವಾಗಿ ವಕಾಲತ್ ಸಲ್ಲಿಸಲು ಹೈಕೋರ್ಟ್ ವಕೀಲರ ಸಂಘ ತಿರಸ್ಕರಿಸಿದೆ.

ವಕೀಲರ ಸಂಘದಲ್ಲಿರುವ ಸುಮಾರು 3500 ವಕೀಲರು ಸಂಘಟಿತರಾಗಿ ಸರಣಿ ಸ್ಫೋಟದಂತಹ ಅಮಾನವೀಯ ಕೃತ್ಯ ಎಸಗಿದ ಭಯೋತ್ಪಾದಕರ ವಿರುದ್ಧ ವಾದಿಸುವುದಿಲ್ಲವೆಂದು ಪ್ರಮಾಣ ಮಾಡಿರುವುದಾಗಿ ಸಂಘದ ಅಧ್ಯಕ್ಷ ಮಾಧವ ಮಿತ್ರಾ ತಿಳಿಸಿದ್ದಾರೆ.

ಮೇ 13ರಂದು ಜೈಪುರದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ 68 ಮಂದಿ ಮೃತರಾಗಿದ್ದರು. ಬಾಂಬ್‌ ಸ್ಫೋಟದ ರೂವಾರಿಯಾದ ಶಾಬಾಜ್‌ನನ್ನು ಲಕ್ನೋದಲ್ಲಿ ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸುವ ಹಿನ್ನೆಲೆಯಲ್ಲಿ ವಕೀಲರ ಸಂಘ ಈ ನಿರ್ಧಾರ ತೆಗೆದುಕೊಂಡಿದೆ.

ರಾಜಸ್ಥಾನ ವಕೀಲರ ಸಂಘ ಈ ಕುರಿತು ಚರ್ಚಿಸಲು ವಕೀಲರ ಸಭೆಯನ್ನು ಕರೆದಿದ್ದು ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ನಡೆಸಲಿದೆ ಎಂದು ಸಂಘದ ಮೂಲಗಳು ತಿಳಿಸಿವೆ.
ಮತ್ತಷ್ಟು
ಸೂರತ್ ಸಜೀವ ಬಾಂಬ್‌ಗಳ ಹಿಂದೆಯೂ ಬಶೀರ್
ಹಿಂಸಾ ಜರ್ಜರಿತ ಕಂಧಮಾಲ್‌ನಲ್ಲಿ ಕಂಡಲ್ಲಿ ಗುಂಡಿಕ್ಕಲು ಆದೇಶ
ಗೋದ್ರಾನಂತರದ ಹಿಂಸಾಚಾರ: ಸು.ಕೋಗೆ ವರದಿ ಸಲ್ಲಿಕೆ
ಬಂಧಿತರ ವಿರುದ್ಧ ಬಿಗಿ ಕ್ರಮ: ಕ್ರೈಮ್ ಬ್ರ್ಯಾಂಚ್
ಜಮ್ಮು: ಎನ್‌ಕೌಂಟರ್‌ಗೆ ಓರ್ವ ಉಗ್ರ ಬಲಿ
ಪ್ರತ್ಯೇಕತೆ ಪರ ವಾದಿಸುವ ಬುದ್ಧಿಜೀವಿಗಳಿಗೆ ಎಚ್ಚರಿಕೆ