ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಿಹಾರ ಪ್ರವಾಹ: ನೆರವಿಗಾಗಿ ಕೇಂದ್ರದ ಸೇನಾಪಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಹಾರ ಪ್ರವಾಹ: ನೆರವಿಗಾಗಿ ಕೇಂದ್ರದ ಸೇನಾಪಡೆ
ಕೋಶಿ ನದಿಯಲ್ಲಿ ಉಲ್ಬಣಿಸಿದ ಪ್ರವಾಹದಿಂದಾಗಿ ಸುಮಾರು 20 ಲಕ್ಷ ಮಂದಿ ನಿರಾಶ್ರಿತರಾಗಿ 45ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು , ನಿರಾಶ್ರಿತರು ಹಾಗೂ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗಾಗಿ ಕೇಂದ್ರ ಸರಕಾರ ಸೇನಾಪಡೆ ಹಾಗೂ ವಾಯುದಳದ ಹೆಲಿಕಾಪ್ಟರ್‌ಗಳನ್ನು ರವಾನಿಸಿರುವುದಾಗಿ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಇದೊಂದು ಭೀಕರ ದುರಂತ ಎಂದು ತಿಳಿಸಿದ ಮುಖ್ಯಮಂತ್ರಿ ನಿತಿಶ್ ಕುಮಾರ್ ನಾಳೆ ಪ್ರಧಾನಮಂತ್ರಿ ಮನ್‌ಮೋಹನ್‌ಸಿಂಗ್ ಅವರನ್ನು ಭೇಟಿ ಮಾಡಿ, ಉತ್ತರ ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳ ನಿರಾಶ್ರಿತರಿಗೆ ಸಹಾಯ ಒದಗಿಸುವಂತೆ ಕೋರಲಾಗುವುದು ಎಂದು ಹೇಳಿದ್ದಾರೆ.

ದೂರದರ್ಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ನಿತಿಶ್ ಕುಮಾರ್, ಕೋಶಿ ನದಿಯ ಪ್ರವಾಹ ಭೀಕರ ದುರಂತವಾಗಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಮಳೆಗಾಲ ಆರಂಭವಾದಂದಿನಿಂದ ಇಲ್ಲಿಯವರೆಗೆ ಪ್ರವಾಹದಿಂದಾಗಿ 800 ಮಂದಿ ಸಾವನ್ನಪ್ಪಿದ್ದು, 15 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. ಕೋಶಿ ನದಿಯ ಪ್ರವಾಹದಿಂದಾಗಿ ರಸ್ತೆಗಳು, ಸೇತುವೆಗಳು ನೀರಿನಲ್ಲಿ ಮುಳುಗಿ ಹೋಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಿಲ್ಲಾಡಳಿತದೊಂದಿಗೆ ಸುಮಾರು 120 ಸೈನಿಕರು ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದು, ಇನ್ನು 240 ಸೈನಿಕರು ಜೊತೆಯಾಗಲಿದ್ದಾರೆ ಎಂದು ವಿಪತ್ತು ನಿರ್ವಹಣಾ ಸಚಿವಾಲಯದ ಹಿರಿಯ ಅಧಿಕಾರಿ ಪ್ರತಾಯಾ ಅಮ್‌ರಿತ್ ತಿಳಿಸಿದ್ದಾರೆ.
ಮತ್ತಷ್ಟು
ಸ್ಫೋಟ ಆರೋಪಿ ಪರ ವಾದಿಸಲು ರಾಜಸ್ಥಾನ ವಕೀಲರ ನಕಾರ
ಸೂರತ್ ಸಜೀವ ಬಾಂಬ್‌ಗಳ ಹಿಂದೆಯೂ ಬಶೀರ್
ಹಿಂಸಾ ಜರ್ಜರಿತ ಕಂಧಮಾಲ್‌ನಲ್ಲಿ ಕಂಡಲ್ಲಿ ಗುಂಡಿಕ್ಕಲು ಆದೇಶ
ಗೋದ್ರಾನಂತರದ ಹಿಂಸಾಚಾರ: ಸು.ಕೋಗೆ ವರದಿ ಸಲ್ಲಿಕೆ
ಬಂಧಿತರ ವಿರುದ್ಧ ಬಿಗಿ ಕ್ರಮ: ಕ್ರೈಮ್ ಬ್ರ್ಯಾಂಚ್
ಜಮ್ಮು: ಎನ್‌ಕೌಂಟರ್‌ಗೆ ಓರ್ವ ಉಗ್ರ ಬಲಿ