ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಮ್ಮು: ಆಘಾತದಿಂದ ಹೊರಬರದ ಒತ್ತೆಯಾಳುಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮು: ಆಘಾತದಿಂದ ಹೊರಬರದ ಒತ್ತೆಯಾಳುಗಳು
"ಇಂತಹ ಮಾನಸಿಕ ಆಘಾತ ಎದುರಾಗುತ್ತದೆ ಎಂದು ಕನಸಿನಲ್ಲೂ ಕೂಡಾ ಯೋಚಿಸಿರಲಿಲ್ಲ" - ಇದು ಶಂಕಿತ ಲಷ್ಕರ್-ಎ-ತೊಯ್ಬಾ ಉಗ್ರರ ಕೈಯಲ್ಲಿ 19 ಗಂಟೆಗಳ ಒತ್ತೆಯಾಳುಗಳಾಗಿ ಸಿಲುಕಿಕೊಂಡು ಬಳಿಕ ಪಾರಾದ ನಾಲ್ಕು ಮಕ್ಕಳು ಸೇರಿದಂತೆ ಏಳು ಮಂದಿಯ ಅನುಭವದ ನುಡಿ.

ಬಿಲ್ಲು ರಾಮ್ ಎಂಬವರ ಮನೆಯಲ್ಲಿ ಉಗ್ರರು ಅವಿತಿದ್ದರು. ಉಗ್ರರು ಮತ್ತು ಸೇನಾಪಡೆಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಬಿಲ್ಲುರಾಮ್ ಕುಟುಂಬದ ಸದಸ್ಯರು ಬದುಕುಳಿದಿದ್ದಾರೆ. ಆದರೆ ನೆರೆಮನೆಯ ತಂದೆ, ಮಗ ಮತ್ತು ಶಿಕ್ಷಕಿಯನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ಉಗ್ರರನ್ನು ಸೇನಾಪಡೆಗಳು ಕೊಂದುಹಾಕಿವೆ.

ಉಗ್ರರು ಅವಿತಿದ್ದ ಮನೆಯಿಂದ ಮೊದಲು ಬಿಲ್ಲುರಾಮ್‌ ಅವರ ಗಾಯಾಳು ಪತ್ನಿಯನ್ನು ಹೊರತರಲಾಯಿತು. ನಂತರ ನಾಲ್ಕು ಮಕ್ಕಳನ್ನು ಪಾರು ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳಲ್ಲಿ ಅತಿ ಕಿರಿಯನಾದ ವಿಪಿನ್ ಕುಮಾರ್ (2), ಕಾಜಲ್ (4), ಇಶಾಂತ್ (6) ಮತ್ತು ಶೀತಲ್ (9) ಅವರುಗಳನ್ನು ಪಾರುಮಾಡಲಾಗಿದೆ. ಬಿಲ್ಲುರಾಮ್ ಸಹೋದರ ಹಾಗೂ ಆತನ ಪತ್ನಿಯನ್ನು ಮುಕ್ತಿಗೊಳಿಸಲಾಗಿದ್ದು, ಕೆಲ ಒತ್ತೆಯಾಳುಗಳು ಇನ್ನೂ ಮಾನಸಿಕ ಆಘಾತದಿಂದ ಹೊರ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯ ಮಾಲಿಕನಾದ ಬಿಲ್ಲುರಾಮ್ ಮಾತನಾಡಿ, "ನಾನು ನನ್ನ ಮಕ್ಕಳ ಜೀವದ ಭರವಸೆಯನ್ನು ಕಳೆದುಕೊಂಡಿದ್ದೆ. ಆದರೆ ದೇವರ ದಯೆಯಿಂದ ಮಕ್ಕಳು ಸುರಕ್ಷಿತವಾಗಿದ್ದಾರೆ. ಉಗ್ರರನ್ನು ಸದೆಬಡೆಯುವಲ್ಲಿ ಯಶಸ್ವಿಯಾದ ಸೇನೆಗೆ ಧನ್ಯವಾದಗಳು" ಎಂದು ಹೇಳಿದರು.

ಉಗ್ರರ ವಿರುದ್ಧದ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ನಮ್ಮ ಸೇನೆಯ ವಿಶೇಷ ತಂಡಗಳು ಮೂವರು ಉಗ್ರರನ್ನು ಕೊಂದುಹಾಕಿವೆ ಎಂದು ಸೇನೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಎಸ್.ಡಿ ಗೋಸ್ವಾಮಿ ತಿಳಿಸಿದ್ದಾರೆ.
ಮತ್ತಷ್ಟು
ಭಾರತ ಅಣುಒಪ್ಪಂದದ ಒತ್ತಡಕ್ಕೆ ಸಿಲುಕದು: ಕಾಕೋಡ್ಕರ್
ಜಮ್ಮು: ಅವಿತಿದ್ದ ಮೂರೂ ಉಗ್ರರ ಹತ್ಯೆ
ಶೀಘ್ರದಲ್ಲಿ ಭಾರತಕ್ಕೆ ಭೇಟಿ-ಪ್ರಚಂಡ
ಜಾರ್ಖಂಡ್ : ಶಿಬು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
ಬಿಹಾರ ಪ್ರವಾಹ: ನೆರವಿಗಾಗಿ ಕೇಂದ್ರದ ಸೇನಾಪಡೆ
ಸ್ಫೋಟ ಆರೋಪಿ ಪರ ವಾದಿಸಲು ರಾಜಸ್ಥಾನ ವಕೀಲರ ನಕಾರ