ಒರಿಸ್ಸಾದಲ್ಲಿ ಕ್ರಿಶ್ಚಿಯನ್ ಚರ್ಚ್ ಮತ್ತು ಸಂಸ್ಥೆಗಳ ಮೇಲೆ ದಾಳಿ ನಡೆಸಿ 10 ಮಂದಿ ಸಾವಿಗೆ ಕಾರಣವಾದ ಘಟನೆಯನ್ನು ವಿರೋಧಿಸಿ ದೇಶದಾದ್ಯಂತ ಶುಕ್ರವಾರ ಕ್ರಿಶ್ಚಿಯನ್ ಸಂಸ್ಥೆಗಳನ್ನು ಮುಚ್ಚಿ ಶಾಂತಿಯುತ ಪ್ರತಿಭಟನೆ ನಡೆಸಲು ಪ್ರಮುಖ ಚರ್ಚ್ ಅಡಳಿತ ಮಂಡಳಿ ನಿರ್ಧರಿಸುವುದಾಗಿ ತಿಳಿಸಿದೆ.
ಒರಿಸ್ಸಾದಲ್ಲಿ ಮುಗ್ದ ಜನತೆಯ ಮೇಲೆ ದೌರ್ಜನ್ಯ ಮುಂದುವರಿದಿರುವುದನ್ನು ವಿರೋಧಿಸಿ ದೇಶದಾದ್ಯಂತ ಕ್ರಿಶ್ಚಿಯನ್ ಅಡಳಿತ ಮಂಡಳಿಗಳ ಶಾಲಾ ಕಾಲೇಜ್‌ಗಳನ್ನು ಮುಚ್ಚಲಾಗುವುದು ಎಂದು ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದ ವಕ್ತಾರ ಬಾಬು ಜೋಸೆಫ್ ಹೇಳಿದ್ದಾರೆ.
ಒರಿಸ್ಸಾದಲ್ಲಿ ದೌರ್ಜನ್ಯಪೀಡಿತ ಜನರಿಗೆ ಪುನರ್‌ವಸತಿಗಾಗಿ ಶೀಘ್ರದಲ್ಲಿ ಪರಿಹಾರ ನೀಡಿ ಆರೋಪಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಪ್ರಧಾನಿಯವರನ್ನು ಕೋರಲಾಗುವುದು ಎಂದು ಜೋಸೆಫ್ ತಿಳಿಸಿದ್ದಾರೆ.
ಒರಿಸ್ಸಾ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಕೋಮವಾದಿಗಳ ದೌರ್ಜನ್ಯ ಹೆಚ್ಚಾಗಿದೆ ಎಂದು ಅಖಿಲ ಭಾರತ ಕ್ರಿಶ್ಚಿಯನ್ ಕೌನ್ಸಿಲ್ ಆರೋಪಿಸಿದೆ.
|