ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಜನ ಆಶೀರ್ವಾದ ಯಾತ್ರೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿ ಧುರೀಣ ಎಲ್.ಕೆ .ಆಡ್ವಾಣಿ ಚಾಲನೆ ನೀಡಿದರು.
ಜನ ಆಶೀರ್ವಾದ ಯಾತ್ರೆ ರಾಜ್ಯದಾದ್ಯಂತ 3 ಸಾವಿರ ಕಿ.ಮಿ. ಸಂಚರಿಸಲಿದ್ದು, 36ಜಿಲ್ಲೆಗಳು ಹಾಗೂ 115 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
'ಸುರಕ್ಷಿತ ಘರ್' 'ಅಭಿವೃದ್ಧಿ ರಾಜ್ಯ' ಸಂದೇಶವನ್ನು ಜನ ಆಶೀರ್ವಾದ ಯಾತ್ರೆ ರಾಜ್ಯದಾದ್ಯಂತ ಸಾರಲಿದ್ದು, ಅಕ್ಟೋಬರ್ 2 ರಂದು ಅಂತ್ಯಗೊಳ್ಳಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಮಧ್ಯಪ್ರದೇಶದ ಚುನಾವಣಾ ಉಸ್ತುವಾರಿಯನ್ನು ಹೊತ್ತಿರುವ ವೆಂಕಯ್ಯನಾಯ್ಡು, ಪ್ರಧಾನ ಕಾರ್ಯದರ್ಶಿ ಸಂಸದ ಅನಂತ್ ಕುಮಾರ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
|