ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರವಾಹದಲ್ಲಿ ಒಂದು ವಾರ ಕಳೆದ ವಿದ್ಯಾರ್ಥಿಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರವಾಹದಲ್ಲಿ ಒಂದು ವಾರ ಕಳೆದ ವಿದ್ಯಾರ್ಥಿಗಳು
ಬಿಹಾರನ ಮಾಧೇಪುರಾದಲ್ಲಿರುವ ಶಾಲೆಯೊಂದು ಕಳೆದ ಏಳು ದಿನಗಳಿಂದ ಜಲಾವೃತವಾಗಿದ್ದು, 20 ಮಕ್ಕಳು ಶಾಲಾ ಕಟ್ಟಡದೊಳಗೆಸಿಲುಕಿರುವುದಾಗಿ ಲಿಟಲ್ ಸ್ಟಾರ್ ಶಾಲೆಯ ಪ್ರಾಂಶುಪಾಲ ಎಸ್.ಎಂ. ಸೋನ್ಸಿ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರವಾಹದಿಂದ ಬಿಹಾರದಲ್ಲಿ ಆತಂಕ ಸೃಷ್ಟಿಸಿದ ಕೋಸಿ ನದಿಗೆ ಹೆಚ್ಚುವರಿಯಾಗಿ ನೇಪಾಳದಿಂದ 1.5ಲಕ್ಷ ಕ್ಯೂಸೆಕ್ಸ್‌ ನೀರನ್ನು ಬಿಡಲಾಗಿರುವ ಹಿನ್ನೆಲೆಯಲ್ಲಿ ಪುರ್ನಿಯಾ ಮತ್ತು ಕಟಿಹಾರ್ ಜಿಲ್ಲೆಗಳ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಪ್ರಧಾನ ಮಂತ್ರಿ ಮನ್‌ಮೋಹನ್ ಸಿಂಗ್ ಪ್ರವಾಹ ಪೀಡಿತ ಪ್ರದೇಶಗಳಿಗೆ ವೈಮಾನಿಕ ಭೇಟಿ ನೀಡಿದ ನಂತರ ಪ್ರವಾಹ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದ್ದು, 1 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಡಳಿತ ಪ್ರವಾಹದ ಮುನ್ನೆಚ್ಚರಿಕೆ ನೀಡಿದ್ದಲ್ಲಿ ಬೆಳಗಿನ ಹಾಜರಾತಿಯ ನಂತರ ಶಾಲೆಯನ್ನು ಬಿಟ್ಟು ತೆರಳಬಹುದಿತ್ತು. ಆದರೆ ಹೇಗಾದರೂ ಮಾಡಿ 15 ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಪಾರು ಮಾಡುವಲ್ಲಿ ಯಶಸ್ವಿಯಾದರೂ ಇನ್ನು 20 ಮಕ್ಕಳು ಶಾಲೆಯಲ್ಲಿದ್ದಾರೆ ಎಂದು ಸೋನ್ಸಿ ಹೇಳಿದ್ದಾರೆ.
ಮತ್ತಷ್ಟು
ಜನ ಆಶೀರ್ವಾದ ಯಾತ್ರೆಗೆ ಆಡ್ವಾಣಿ ಚಾಲನೆ
ಒರಿಸ್ಸಾ ಹಿಂಸಾಚಾರ ಖಂಡಿಸಿ ಅ.29ಕ್ಕೆ ಬಂದ್
ಪುದುಚೇರಿ ಸಿಎಂ ರಂಗಸ್ವಾಮಿ ರಾಜೀನಾಮೆ
ಬಿಹಾರ ಪ್ರವಾಹ 'ರಾಷ್ಟ್ರೀಯ ವಿಕೋಪ': ಪ್ರಧಾನಿ ಘೋಷಣೆ
ಜಮ್ಮು: ಆಘಾತದಿಂದ ಹೊರಬರದ ಒತ್ತೆಯಾಳುಗಳು
ಭಾರತ ಅಣುಒಪ್ಪಂದದ ಒತ್ತಡಕ್ಕೆ ಸಿಲುಕದು: ಕಾಕೋಡ್ಕರ್