ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಹಜ ಸ್ಥಿತಿಯತ್ತ ಮರಳುತ್ತಿರುವ ಒರಿಸ್ಸಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಹಜ ಸ್ಥಿತಿಯತ್ತ ಮರಳುತ್ತಿರುವ ಒರಿಸ್ಸಾ
ಕೋಮುಗಲಭೆಯಿಂದ ಹೊತ್ತಿ ಉರಿದು, ಹತ್ತು ಮಂದಿಯನ್ನು ಬಲಿತೆಗೆದುಕೊಂಡಿರುವ ಒರಿಸ್ಸಾದ ಕಂಧಮಾಲ್ ಜಿಲ್ಲೆ ಸಹಜ ಸ್ಥಿತಿಗೆ ಮರಳುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಕರ್ಫ್ಯೂ ಸಡಿಸಲಾಗಿದೆ. ಆರು ಕಡೆಗಳಲ್ಲಿ ಪರಿಹಾರ ಕೇಂದ್ರಗಳು ಮತ್ತು ಸಾಮೂಹಿಕ ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಒರಿಸ್ಸಾ ಸಮ್ಮಿಶ್ರ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳಬೇಕು ಎಂದು ಕೆಲವು ಬಿಜೆಪಿ ಶಾಸಕರು ಮತ್ತು ಸಚಿವರು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರು, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿಮಾಡಿ, ವಿಶ್ವಹಿಂದೂ ನಾಯಕ ಲಕ್ಷ್ಮಣಾನಂದ ಸರಸ್ವತಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾವೋವಾದಿಗಳನ್ನು ಶಂಕಿಸುವ ಬದಲಿಗೆ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ. ಯಾವುದೇ ಕಾರಣಕ್ಕೂ ನಿಜವಾದ ಅಪರಾಧಿಗಳು ಬಚಾವ್ ಆಗಲೇಬಾರದು ಎಂದೂ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

ಕಂಧಮಾಲ್‌ನಲ್ಲಿ ಪರಿಸ್ಥಿತಿ ಸಹಜತೆಯತ್ತ ಮರಳುತ್ತಿದೆ ಎಂದು ವಿಧಾನಸಭೆಯಲ್ಲಿ ನುಡಿದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಮುಕ್ತ ಗಂಜಿಕೇಂದ್ರಗಳು ಮತ್ತು ಪರಿಹಾರ ಶಿಬಿರಗಳನ್ನು ಆರು ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಮತ್ತು ಜನತೆಯಲ್ಲಿ ಸಾಮರಸ್ಯದ ಖಚಿತತೆಗಾಗಿ ಪಥಸಂಚಲನ ನಡೆಸಲು ಹೇಳಿರುವುದಾಗಿ ಅವರು ತಿಳಿಸಿದರು.
ಮತ್ತಷ್ಟು
ಪಕ್ಷ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ: ಚಿರಂಜೀವಿ
ಪ್ರವಾಹದಲ್ಲಿ ಒಂದು ವಾರ ಕಳೆದ ವಿದ್ಯಾರ್ಥಿಗಳು
ಜನ ಆಶೀರ್ವಾದ ಯಾತ್ರೆಗೆ ಆಡ್ವಾಣಿ ಚಾಲನೆ
ಒರಿಸ್ಸಾ ಹಿಂಸಾಚಾರ ಖಂಡಿಸಿ ಅ.29ಕ್ಕೆ ಬಂದ್
ಪುದುಚೇರಿ ಸಿಎಂ ರಂಗಸ್ವಾಮಿ ರಾಜೀನಾಮೆ
ಬಿಹಾರ ಪ್ರವಾಹ 'ರಾಷ್ಟ್ರೀಯ ವಿಕೋಪ': ಪ್ರಧಾನಿ ಘೋಷಣೆ