ಭುವನೇಶ್ವರ: ಕಂಧಮಲ್‌ನಲ್ಲಿ ನಡೆದಿರುವ ಹಿಂಸಾಚಾರವನ್ನು ಪ್ರತಿಭಟಿಸಿ ರಾಷ್ಟ್ರಾದ್ಯಂತ ಕ್ರಿಶ್ಚಿಯನ್ ಸಂಘಟನೆಗಳು ನಡೆಸುತ್ತಿರುವ ಸುಮಾರು 30,000 ಶಾಲಾ ಕಾಲೇಜುಗಳನ್ನು ಮುಚ್ಚಿ ಶುಕ್ರವಾರ ಪ್ರತಿಭಟನೆ ನಡೆಸಲಾಗುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಕ್ರಿಶ್ಚಿಯನ್ ಸಂಘಟನೆಗಳು ಒರಿಸ್ಸಾ ಭವನದ ಎದುರು ಪ್ರತಿಭಟನೆ ನಡೆಸಲಿದ್ದಾರೆ.
ಹಿಂಸಾಚಾರದ ಪ್ರತಿಕ್ರಿಯೆ ಎಂಬಂತೆ ಗಲಭೆ ಜರ್ಜರಿತ ಜಿಲ್ಲೆಗಳಲ್ಲಿ ಪೊಲೀಸ್ ಅಧಿಕಾರಿಗಳ ಬದಲಾವಣೆ ಮಾಡಲಾಗಿದೆ. ಕಟಕ್‌ನ ಮಾಜಿ ಡಿಸಿಪಿ ಅವರನ್ನು ಕಂಧಮಲ್‌ನ ನೂತನ ಎಸ್ಪಿಯಾಗಿ ನೇಮಿಸಲಾಗಿದೆ.
ನವೀನ್ ಪಟ್ನಾಯಕ್ ಸರಕಾರವು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ದೂರಿದ್ದು, ಒರಿಸ್ಸಾ ಸದನದಲ್ಲಿ ಪಟ್ನಾಯಕ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಸಾಧ್ಯತೆ ಇದೆ.
|