ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಇಬ್ಬರು ಲಷ್ಕರೆ-ಇ-ತೊಯ್ಬಾ ಉಗ್ರರನ್ನು ಸೇನಾಪಡೆಗಳು ಬಂಧಿಸಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೋಡಾ ಪಟ್ಟಣದ ನಲ್ಲಾ ಪ್ರದೇಶದಲ್ಲಿ 10 ನೇ ರಾಷ್ಟ್ರೀಯ ರೈಫಲ್ಸ್ ಪಡೆಗಳು ವ್ಯಾಪಕ ಕಾರ್ಯಾಚರಣೆ ನಡೆಸಿ ಇಬ್ಬರು ಲಷ್ಕರೆ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
18 ವರ್ಷದ ಖುರ್ಷಿದ್ ಆಹಮದ್ ಹಾಗೂ 22 ವರ್ಷ ವಯಸ್ಸಿನ ಫಾರೂಖ್ ಅಹಮದ್ ಎಂಬಿಬ್ಬರು ಲಷ್ಕರೆ ಉಗ್ರರನ್ನು ಸೇನೆ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರನ್ನು ಪಾಕಿಸ್ತಾನ ಮೂಲದ ಲಷ್ಕರೆ-ಇ-ತೊಯ್ಬಾ ನೇಮಕ ಮಾಡಿಕೊಂಡು ತರಬೇತಿಯನ್ನು ನೀಡಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಬಂಧಿತರನ್ನು ಜಂಟಿ ತನಿಖಾ ಕೇಂದ್ರಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
|