ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಳಿನಿ ಬಿಡುಗಡೆ ಅರ್ಜಿಗೆ ತ.ನಾ ಸರಕಾರ ವಿರೋಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಳಿನಿ ಬಿಡುಗಡೆ ಅರ್ಜಿಗೆ ತ.ನಾ ಸರಕಾರ ವಿರೋಧ
ರಾಜೀವ್ ಗಾಂಧಿ ಹತ್ಯಾ ಪ್ರಕರಣ ಆರೋಪಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಬಿಡುಗಡೆ ವಿರೋಧಿಸಿ ತಮಿಳ್ನಾಡು ಸರಕಾರ ಮದ್ರಾಸ್ ಹೈಕೋರ್ಟಿಗೆ ಅರ್ಜಿಸಲ್ಲಿಸಿದೆ.

ವೆಲ್ಲೂರು ಜೈಲಿನಲ್ಲಿರುವ ನಳಿನಿ ಈ ವರ್ಷದ ಆದಿಯಲ್ಲಿ ತನ್ನ ಶೀಘ್ರ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದಳು. ಜೈಲಿನಲ್ಲಿ ತನ್ನ ಉತ್ತಮ ಗುಣನಡತೆಯನ್ನು ಆಧಾರವಾಗಿಸಿ ಮಾಫಿ ಕೋರಿ ಆಕೆ ನ್ಯಾಯಾಲಯಕ್ಕೆ ಈ ಮನವಿ ಮಾಡಿಕೊಂಡಿದ್ದಾಳೆ.

ಆದರೆ, ಆಕೆ ತನ್ನ ಶಿಕ್ಷಾವಧಿಯಲ್ಲಿ ಮೂರು ಸಣ್ಣ ಅಪರಾಧಗಳನ್ನು ಎಸಗಿರುವುದಾಗಿ ಹೇಳಿರುವ ಸರಕಾರ, ಇದೇ ಆಧಾರದಲ್ಲಿ ನಳಿನಿ ಬಿಡುಗಡೆಯನ್ನು ವಿರೋಧಿಸುತ್ತಿದೆ.

ಗರ್ಭಿಣಿಯಾಗಿದ್ದ ನಳಿನಿಗೆ, ರಾಜೀವ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ವಿಧಿಸಲಾಗಿತ್ತು. ಆದರೆ, ಅನುಕಂಪದ ಆಧಾರದಲ್ಲಿ ಸೋನಿಯಾ ಗಾಂಧಿ ಅವರ ಮಧ್ಯಪ್ರವೇಶದಿಂದಾಗಿ, ನಳಿನಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು 1999ರಲ್ಲಿ ಜೀವಾವಧಿ ಶಿಕ್ಷೆಯಾಗಿ ಇಳಿಸಲಾಗಿತ್ತು.

ಬಳಿಕ ನಳಿನಿ ಜೈಲಿನಲ್ಲಿ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಳು.

ರಾಜೀವ್ ಗಾಂಧಿ ಪುತ್ರಿ ಪ್ರಿಯಾಂಕಾ ಕೆಲವು ದಿನಗಳ ಹಿಂದೆ ನಳಿನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ ತನ್ನ ಭೇಟಿಯು ಖಾಸಗಿ ಭೇಟಿಯಾದ್ದು ಇದಕ್ಕೆ ಯಾವುದೇ ರಾಜಕೀಯ ಬಣ್ಣ ಬಳಿಯಬಾರದು ಎಂದು ಅವರು ಹೇಳಿಕೆ ನೀಡಿದ್ದರು.
ಮತ್ತಷ್ಟು
ಒರಿಸ್ಸಾ: ಕಂಧಮಲ್‌ನಲ್ಲಿ ಮತ್ತೆ ಹಿಂಸಾಚಾರ
ಬಂದ್ ವಿರೋಧಿ ಹೇಳಿಕೆ: ಬುದ್ದ ಕ್ಷಮೆಯಾಚನೆ
ಇಬ್ಬರು ಲಷ್ಕರೆ ಉಗ್ರರ ಬಂಧನ
ಕಂಧಮಲ್ ಹಿಂಸಾಚಾರ ಪ್ರತಿಭಟಿಸಿ ಬಂದ್
ಒರಿಸ್ಸಾ ಗಲಭೆ ರಾಷ್ಟ್ರೀಯ ಅವಮಾನ: ಸಿಂಗ್
ಸಹಜ ಸ್ಥಿತಿಯತ್ತ ಮರಳುತ್ತಿರುವ ಒರಿಸ್ಸಾ