ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒರಿಸ್ಸಾ ಹಿಂಸಾಚಾರ ಸಿಬಿಐ ತನಿಖೆಗೆ: ಸಿಬಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒರಿಸ್ಸಾ ಹಿಂಸಾಚಾರ ಸಿಬಿಐ ತನಿಖೆಗೆ: ಸಿಬಲ್
ಒರಿಸ್ಸಾದಲ್ಲಿ ನಡೆದ ಕೋಮಗಲಭೆ ಹಿಂಸಾಚಾರ ಕುರಿತಂತೆ ಗಂಭೀರ ಕಳವಳ ವ್ಯಕ್ತಪಡಿಸಿದ ಕೇಂದ್ರ ಸರಕಾರ ಸಿಬಿಗೆ ವಹಿಸಲು ಚಿಂತನೆ ನಡೆಸಿದೆ ಎಂದು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.

ನ್ಯಾಯಾಂಗ ತನಿಖೆಯಿಂದ ಸತ್ಯಾಂಶ ಹೊರಬರಲು ವಿಳಂಬವಾಗುವ ಹಿನ್ನೆಲೆಯಲ್ಲಿ ಹಿಂಸಾಚಾರ ಪೀಡಿತರಿಗೆ ಶೀಘ್ರವಾಗಿ ನ್ಯಾಯ ಪಡೆಯುವಂತಾಗಲು ಸಿಬಿಐಗೆ ವಹಿಸುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವ ಸಿಬಲ್ ಹೇಳಿದ್ದಾರೆ.

ರಾಜ್ಯ ಸರಕಾರ ಸಿಬಿಐ ತನಿಖೆ ನಡೆಸುವಂತೆ ಕೇಂದ್ರಕ್ಕೆ ಮನವಿ ಮಾಡಿದಲ್ಲಿ ಮಾತ್ರ ತನಿಖೆ ನಡೆಸಲಾಗುವುದು. ಅದು ರಾಜ್ಯದ ವಿವೇಚನೆಗೆ ಬಿಟ್ಟ ಸಂಗತಿ ಎಂದು ಸಿಬಲ್ ಹೇಳಿದ್ದಾರೆ.

ಒರಿಸ್ಸಾ ಘಟನೆಯ ಕುರಿತಂತೆ ಪ್ರಧಾನಮಂತ್ರಿ ಕಳವಳ ವ್ಯಕ್ತಪಡಿಸಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದ್ದು, ಪರಿಸ್ಥಿತಿ ತಿಳಿಗೊಳಿಸಲು ರಾಜ್ಯ ಸರಕಾರಕ್ಕೆ ಅಗತ್ಯವಿರುವ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವ ಸಿಬಲ್ ತಿಳಿಸಿದ್ದಾರೆ.

ಯಾವುದೇ ಒಂದು ಸಮುದಾಯಕ್ಕೆ ಸೇರಿದ ಜನ ಮತ್ತೊಂದು ಸಮುದಾಯಕ್ಕೆ ಸೇರಿದವರ ಮೇಲೆ ದಾಳಿ ಮಾಡುವುದು ವಿವೇಚನರಹಿತ ಕೃತ್ಯ. ಕೇಂದ್ರ ಜಾತ್ಯತೀತತೆಗೆ ಬದ್ದವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
ಮತ್ತಷ್ಟು
ನಳಿನಿ ಬಿಡುಗಡೆ ಅರ್ಜಿಗೆ ತ.ನಾ ಸರಕಾರ ವಿರೋಧ
ಒರಿಸ್ಸಾ: ಕಂಧಮಲ್‌ನಲ್ಲಿ ಮತ್ತೆ ಹಿಂಸಾಚಾರ
ಬಂದ್ ವಿರೋಧಿ ಹೇಳಿಕೆ: ಬುದ್ದ ಕ್ಷಮೆಯಾಚನೆ
ಇಬ್ಬರು ಲಷ್ಕರೆ ಉಗ್ರರ ಬಂಧನ
ಕಂಧಮಲ್ ಹಿಂಸಾಚಾರ ಪ್ರತಿಭಟಿಸಿ ಬಂದ್
ಒರಿಸ್ಸಾ ಗಲಭೆ ರಾಷ್ಟ್ರೀಯ ಅವಮಾನ: ಸಿಂಗ್