ರಾಂಚಿ : ಜಾರ್ಖಂಡ್ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಶಿಬು ಸೊರೇನ್, ವಿಧಾನಸಭೆಯಲ್ಲಿ 42 ಶಾಸಕರು ಪರವಾಗಿ ಹಾಗೂ 34 ಸದಸ್ಯರು ವಿರೋಧವಾಗಿ ಮತಚಲಾಯಿಸಿದ್ದರಿಂದ ಬಹುಮತವನ್ನು ಪಡೆದುಕೊಂಡಿದ್ದಾರೆ.
ಸ್ಟೆಫನ್ ಮರಾಂಡಿ (ಪಕ್ಷೇತರ) ಸುಧೀರ್ ಮಹತೋ(ಜೆಎಂಎಂ) ಕಮಲೇಶ್‌ಕುಮಾರ್ ಸಿಂಗ್(ಎನ್‌ಸಿಪಿ) ಅನೋಶ್ ಎಕ್ಕಾ (ಪಕ್ಷೇತರ), ಹರಿನಾರಾಯಣ್ ರೈ(ಪಕ್ಷೇತರ)ಜೋಬಾ ಮಝಿ (ಪಕ್ಷೇತರ) ನಳಿನ್ ಸೊರೇನ್(ಜೆಎಂಎಂ)ಬಂಧು ತಿರ್ಕೆ(ಪಕ್ಷೇತರ) ಅಪರ್ಣಾ ಸೆನ್‌ಗುಪ್ತಾ(ಫಾರ್ವರ್ಡ್ ಬ್ಲಾಕ್)ದುಲಾಲ್ ಭುಯ್ಯಾ (ಜೆಎಂಎಂ) ಭಾನು ಪ್ರತಾಪ್ ಸಾಹಿ(ಸ್ವತಂತ್ರ) ಶಿಬುಸೊರೇನ್ ಹಾಗೂ 11 ಸಚಿವರಿಗೆ ರಾಜ್ಯಪಾಲರು ಸಯ್ಯದ್ ಸಿಬ್ತೆ ರಝಿ ಪ್ರಮಾಣ ವಚನ ಬೋಧಿಸಿದರು.
ಆಗಸ್ಟ್ 25ರಂದು ರಾಜ್ಯಪಾಲರಿಗೆ 42 ಶಾಸಕರ ಬೆಂಬಲ ಪತ್ರ ನೀಡಿದ್ದ ಶಿಬು ಸೊರೇನ್, ಮಧು ಕೋಡಾ ಅವರನ್ನು ಬೆಂಬಲಿಸಿದ್ದ ಪಕ್ಷೇತರ ಅಭ್ಯರ್ಥಿಗಳನ್ನು ವ್ಯಯಕ್ತಿಕವಾಗಿ ಭೇಟಿ ಮಾಡಿದ್ದರು. ನಂತರ ಪಕ್ಷೇತರ ಅಭ್ಯರ್ಥಿಗಳ 12ಬೇಡಿಕೆಗಳನ್ನು ಈಡೇರಿಸಲು ಸಮ್ಮತಿಸಿದ ಶಿಬು ಸೊರೇನ್ ಪಕ್ಷೇತರ ಅಭ್ಯರ್ಥಿಗಳ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಕಳೆದ ವಾರ ಶಿಬುಸೊರೇನ್ ಕೋಡಾ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡ ಪರಿಣಾಮ ಸರಕಾರ ಬಹುಮತ ಕಳೆದುಕೊಂಡಿತ್ತು .
|