ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಗ್ರರ ಸುಳಿವು: ಸೇನಾಪಡೆಗಳ ಭಾರೀ ಕಾರ್ಯಾಚರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ಸುಳಿವು: ಸೇನಾಪಡೆಗಳ ಭಾರೀ ಕಾರ್ಯಾಚರಣೆ
ನಗರದ ಹೊರವಲಯದಲ್ಲಿ ಇಬ್ಬರು ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸೇನಾಪಡೆಗಳು ವ್ಯವಸ್ಥಿತ ರೀತಿಯ ಭಾರೀ ಕಾರ್ಯಾಚರಣೆ ನಡೆಸಿವೆ ಎಂದು ಸೇನಾಮೂಲಗಳು ತಿಳಿಸಿವೆ.

ಜಮ್ಮು ನಗರದ ಹೊರವಲಯದಲ್ಲಿರುವ ರತ್ನಚೌಕ್ ಪ್ರದೇಶದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದ ಉಗ್ರಗಾಮಿಗಳು ಅವಿತಿದ್ದಾರೆ ಎನ್ನುವ ಮಾಹಿತಿಯನ್ನು ಮಹಿಳೆಯೊಬ್ಬಳು ಪೊಲೀಸರಿಗೆ ನೀಡಿದ ಹಿನ್ನೆಲೆಯಲ್ಲಿ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉಗ್ರರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಸೇನೆಯ 26ನೇ ಇನ್‌ಫೆಂಟ್ರಿ ಡಿವಿಜನ್‌ನ ನೆರವನ್ನು ಪಡೆದ ಪೊಲೀಸರು, ಉಗ್ರರು ಅವಿತಿದ್ದಾರೆ ಎಂದು ಹೇಳಲಾಗಿರುವ ಪ್ರದೇಶವನ್ನು ಸುತ್ತವರಿದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರಾದ್ಯಂತ ಸೇನಾಪಡೆಗಳು ಹಾಗೂ ಪೊಲೀಸರು ಕಟ್ಟೆಚ್ಚರವಹಿಸಿದ್ದು ನಗರಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ರಸ್ತೆಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

ಆಗಸ್ಟ್ 26 ರಂದು ಜಮ್ಮುವಿನ ಕನಾಚಾಕ್‌ನ ಅಂತಾರಾಷ್ಟ್ರೀಯ ಗಡಿ ಮೂಲಕ ಪಾಕಿಸ್ತಾನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರು ದೇಶದೊಳಗೆ ನುಸಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮತ್ತಷ್ಟು
ಜಾರ್ಖಂಡ್: ಸೊರೆನ್ ಬಹುಮತ ಸಾಬೀತು
ಒರಿಸ್ಸಾ ಹಿಂಸಾಚಾರ ಸಿಬಿಐ ತನಿಖೆಗೆ: ಸಿಬಲ್
ನಳಿನಿ ಬಿಡುಗಡೆ ಅರ್ಜಿಗೆ ತ.ನಾ ಸರಕಾರ ವಿರೋಧ
ಒರಿಸ್ಸಾ: ಕಂಧಮಲ್‌ನಲ್ಲಿ ಮತ್ತೆ ಹಿಂಸಾಚಾರ
ಬಂದ್ ವಿರೋಧಿ ಹೇಳಿಕೆ: ಬುದ್ದ ಕ್ಷಮೆಯಾಚನೆ
ಇಬ್ಬರು ಲಷ್ಕರೆ ಉಗ್ರರ ಬಂಧನ