ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಶಾಂತಿ ಸೂತ್ರ: ಸಂಘರ್ಷ ಸಮಿತಿ ತಿರಸ್ಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಾಂತಿ ಸೂತ್ರ: ಸಂಘರ್ಷ ಸಮಿತಿ ತಿರಸ್ಕಾರ
ಅಮರನಾಥ ಭೂವಿವಾದದ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಜಮ್ಮುವಿನಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಇತಿಶ್ರೀ ಹಾಡಲು ತೀವ್ರ ಪ್ರಯತ್ನ ನಡೆಸುತ್ತಿರುವ ಸರಕಾರ, ಶಾಂತಿ ಸೂತ್ರವನ್ನು ಸಿದ್ಧಪಡಿಸಿದೆ. ಇದರ ಪ್ರಕಾರ, ಬಾಲ್ಟಲ್ ದೋಮೈಲ್‌ನ 100 ಎಕರೆ ಭೂಮಿಯನ್ನು, ಪವಿತ್ರ ಅಮರನಾಥ ಯಾತ್ರೆ ವೇಳೆಗೆ ತಾತ್ಕಾಲಿಕವಾಗಿ ಬಳಸಿಕೊಳ್ಳಲು ಅನುಕೂಲ ನೀಡಲಾಗುವುದು ಎಂದು ಹೇಳಲಾಗಿದೆ.

ವಾರಾಂತ್ಯದಲ್ಲಿ, ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್.ಎನ್. ವೋರಾ ಅವರು ಈ ರಾಜೀಸೂತ್ರವನ್ನು ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಲಿದ್ದು, ಬಳಿಕ ಇದರ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಅಮರನಾಥ ಮಂದಿರ ಮಂಡಳಿಗೆ ಭೂಮಿಯ ಹಸ್ತಾಂತರದ ಕುರಿತು ಪರ ಮತ್ತು ವಿರೋಧ ಪ್ರತಿಭಟನೆಗಳು ನಡೆಯುತ್ತಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಅಲ್ಲೋಲ-ಕಲ್ಲೋಲವಾಗಿದೆ.

ರಾಜೀ ಸೂತ್ರದ ಪ್ರಕಾರ, ಅಮರನಾಥ ಯಾತ್ರಾ ಸಂದರ್ಭದ ಮೂರು ತಿಂಗಳ ಕಾಲ ಸರಕಾರವು ಈ ಭೂಮಿಯ್ನು ಬಳಸಿಕೊಳ್ಳಲು ಅವಕಾಶ ನೀಡಲಿದೆ. ಇದಲ್ಲದೆ, ಈ ಭೂಮಿಯಲ್ಲಿ ಯಾತ್ರೆಯ ವೇಳೆ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಲು ಪುನಾರಚಿತ ಅಮರನಾಥ ಮಂದಿರ ಮಂಡಳಿಗೆ ಅನುವು ನೀಡಲಿದೆ ಮತ್ತು ಯಾತ್ರೆ ಮುಗಿದ ಬಳಿಕ ಇವುಗಳನ್ನು ಕೆಡವಲಾಗುವುದು.

ಭೂಮಿಯನ್ನು ತಾತ್ಕಾಲಿಕ ನೆಲೆಯಲ್ಲಷ್ಟೆ ಮಂದಿರ ಮಂಡಳಿಗೆ ನೀಡಲಾಗುವುದು ಮತ್ತು ಭೂಮಿಯ ಮಾಲಿಕತ್ವದ ವರ್ಗಾವಣೆಗೆ ಅವಕಾಶ ನೀಡಲಾಗುವುದಿಲ್ಲ. ಭೂಮಿಯ ಬಳಕೆಯ ವೇಳೆಗೂ ಭೂಮಿಯ ಹಕ್ಕಿನ ಕುರಿತು ಯಾವುದೇ ಬದಲಾವಣೆಗಳು ಇರುವುದಿಲ್ಲ. ಈ ವಿವಾದಿತ ಭೂಮಿಯಲ್ಲಿ ಯಾತ್ರಿಗಳಿಗೆ ಸೇವೆಗಳನ್ನು ಸ್ಥಳೀಯ ಜನತೆ ನೀಡಲಿದ್ದಾರೆ.

ಅಮರನಾಥ ಮಂದಿರ ಮಂಡಳಿಗೆ ಭೂಮಿ ಹಸ್ತಾಂತರವನ್ನು ವಿರೋಧಿಸುತ್ತಿರುವ ಪ್ರಮುಖ ಪಕ್ಷವಾಗಿರುವ ಪಿಡಿಪಿಯು ಈ ರಾಜೀ ಸೂತ್ರವನ್ನು ತಾನು ವಿರೋಧಿಸುವುದಾಗಿ ಹೇಳಿದೆ ಎಂದು ಮೂಲಗಳು ಹೇಳಿವೆ. ಅಮರನಾಥ ಸಂಘರ್ಷ ಸಮಿತಿ ಮತ್ತು ರಾಜ್ಯಪಾಲರಿಂದ ನೇಮಕವಾಗಿರುವ ಸಮಿತಿ ನಡುವಿನ ನಾಲ್ಕು ಸುತ್ತುಗಳ ಮಾತುಕತೆ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.

ಶಾಂತಿ ಸೂತ್ರಕ್ಕೆ ಸಂಘರ್ಷ ಸಮಿತಿ ತಿರಸ್ಕಾರ
ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿಯ ಸುಧಾರಣೆಗಾಗಿ ಸರಕಾರದ ಉದ್ದೇಶಿತ ಶಾಂತಿ ಸೂತ್ರವನ್ನು ಅಮರನಾಥ ಸಂಘರ್ಷ ಸಮಿತಿ ನಿರಾಕರಿಸಿದೆ.

ಅಮರನಾಥ ಮಂದಿರ ಮಂಡಳಿಯ ವಶಕ್ಕೆ ವಿವಾದಿತ ಭೂಮಿಯನ್ನು ಸಂಪೂರ್ಣವಾಗಿ ಹಸ್ತಾಂತರಿಸದಿದ್ದರೆ ಯಾವುದೇ ಸೂತ್ರವನ್ನು ಸ್ವೀಕರಿಸುವುದಿಲ್ಲ ಎಂದು ಸಮಿತಿಯ ವಕ್ತಾರ ಡಾ| ಜಿತೇಂದರ್ ಅವರು ಹೇಳಿರುವುದಾಗಿ ಎನ್‌ಡಿಟಿವಿಗೆ ವರದಿ ಮಾಡಿದೆ.
ಮತ್ತಷ್ಟು
ಕುಸೇಲನ್‌ಗ್ಯಾಕೋ ಟೈಮ್ ಸರಿಇಲ್ಲ!
ಬಿಹಾರ: ಪರಿಹಾರಕಾರ್ಯದ ದೋಣಿ ಮುಳುಗಿ 20 ಬಲಿ
ಉಗ್ರರ ಸುಳಿವು: ಸೇನಾಪಡೆಗಳ ಭಾರೀ ಕಾರ್ಯಾಚರಣೆ
ಜಾರ್ಖಂಡ್: ಸೊರೆನ್ ಬಹುಮತ ಸಾಬೀತು
ಒರಿಸ್ಸಾ ಹಿಂಸಾಚಾರ ಸಿಬಿಐ ತನಿಖೆಗೆ: ಸಿಬಲ್
ನಳಿನಿ ಬಿಡುಗಡೆ ಅರ್ಜಿಗೆ ತ.ನಾ ಸರಕಾರ ವಿರೋಧ