ಕಾನೂನುಬಾಹಿರವಾಗಿ ಕೃಷ್ಣಮೃಗವನ್ನು ಭೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಧರ್ಮಾರಾವ್ ಆತ್ರಾಮ್ ಅವರನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಗುರುವಾರ ಮತ್ತು ಶುಕ್ರವಾರದಂದು ಪೊಲೀಸರು ಮಾಜಿ ಸಚಿವ ಧರ್ಮಾರಾವ್ ಆತ್ರಾಮ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಕುರಿತ ಹೇಳಿಕೆಯನ್ನು ಧ್ವನಿಮದ್ರಿಸಿಕೊಳ್ಳಲಾಗಿದೆ. ಆದರೆ ಮಾಜಿ ಸಚಿವರು ಅನಾರೋಗ್ಯದ ಕಾರಣ ನೀಡಿದ ಹಿನ್ನೆಲೆಯಲ್ಲಿ ಬಂಧಮುಕ್ತಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೃಷ್ಣಮೃಗ ಪ್ರಕರಣದಲ್ಲಿ ಮಾಜಿ ಸಚಿವ ಆತ್ರಾಮ್ ಅಂಗರಕ್ಷಕ ಅವಿನಾಶ್ ನಾಟೇಕರ್ ಪ್ರಮುಖ ಸಾಕ್ಷಿಯಾಗಿದ್ದು, ಮಾಜಿ ಸಚಿವರ ಸಹಚರರು ಅರಣ್ಯ ಪ್ರದೇಶದಲ್ಲಿದ್ದ ಕೃಷ್ಣಮೃಗದ ಮೇಲೆ ಟಾರ್ಚ್ ಲೈಟ್‌ಗಳಿಂದ ಬೆಳಕು ತೋರಿದ ನಂತರ ಮಾಜಿ ಸಚಿವ ಆತ್ರಾಮ್ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶಾಸಕರಾದ ಧರ್ಮಾರಾವ್ ಆತ್ರಾಮ್ ಅರಣ್ಯ ಇಲಾಖೆಯ ಮೇಲೆ ರಾಜಕೀಯ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂದು ಇಲಾಖೆ ಮೂಲಗಳು ಆರೋಪಿಸಿವೆ.
|