ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಣು ಒಪ್ಪಂದ: ಪ್ರಧಾನಿ ,ಸೋನಿಯಾ ಚರ್ಚೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದ: ಪ್ರಧಾನಿ ,ಸೋನಿಯಾ ಚರ್ಚೆ
ವಿಯನ್ನಾದಲ್ಲಿ ಪರಮಾಣು ಸರಬರಾಜು ದೇಶಗಳ ಒಕ್ಕೂಟದ ಸಭೆ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಇತರ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ, ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಉಪಸ್ಥಿತರಿದ್ದರು.

ಸೆಪ್ಟೆಂಬರ್ 4-5 ರಂದು ಎನ್‌ಎಸ್‌ಜಿ ಸಭೆ ನಡೆಯಲಿರುವುದರಿಂದ ಅಮೆರಿಕ ನೂತನ ಪರಿಷ್ಕೃತ ಕರಡು ಸಿದ್ಧಪಡಿಸುತ್ತಿದ್ದು, ಭಾರತ ಕರಡನ್ನು ಪರಮಾಣು ಸರಬರಾಜು ದೇಶಗಳ ಒಕ್ಕೂಟದ ಮುಂದೆ ಸಲ್ಲಿಸಲಿದೆ.

ಮೂಲ ಎನ್‌ಎಎಸ್‌ಜಿ ಕರಡಿನಲ್ಲಿ ಕೆಲ ಅಂಶಗಳ ಬಗ್ಗೆ ಪರಮಾಣು ಸರಬರಾಜು ದೇಶಗಳ ಒಕ್ಕೂಟದ ಕೆಲ ದೇಶಗಳು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನೂತನ ಕರಡನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಪ್ರಧಾನಿ ಮನಮೋಹನ್ ಸಿಂಗ್ ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣ್ ಮತ್ತು ಅಣು ಶಕ್ತಿ ಆಯೋಗದ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಅವರೊಂದಿಗೆ ಅಣು ಒಪ್ಪಂದ ಕುರಿತಂತೆ ಚರ್ಚಿಸಲಾಗಿದ್ದು, 45 ರಾಷ್ಟ್ರಗಳ ಒಕ್ಕೂಟ ಮುಕ್ತ ಹಾಗೂ ಬೇಷರತ್ತಾಗಿ ಅನುಮತಿ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಶಿವಶಂಕರ್ ಮೆನನ್ ಸದ್ಯ ಅಮೆರಿಕದಲ್ಲಿದ್ದು, ಅಮೆರಿಕದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಪ್ರಣಬ್ ಮುಖರ್ಜಿ ಹಾಗೂ ಕಾಕೋಡ್ಕರ್‌ಗೆ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.
ಮತ್ತಷ್ಟು
ಕೃಷ್ಣಮೃಗ ಪ್ರಕರಣ: ಮಾಜಿ ಸಚಿವ ಆತ್ರಾಮ್ ಬಂಧನ
ಶಾಂತಿ ಸೂತ್ರ: ಸಂಘರ್ಷ ಸಮಿತಿ ತಿರಸ್ಕಾರ
ಕುಸೇಲನ್‌ಗ್ಯಾಕೋ ಟೈಮ್ ಸರಿಇಲ್ಲ!
ಬಿಹಾರ: ಪರಿಹಾರಕಾರ್ಯದ ದೋಣಿ ಮುಳುಗಿ 20 ಬಲಿ
ಉಗ್ರರ ಸುಳಿವು: ಸೇನಾಪಡೆಗಳ ಭಾರೀ ಕಾರ್ಯಾಚರಣೆ
ಜಾರ್ಖಂಡ್: ಸೊರೆನ್ ಬಹುಮತ ಸಾಬೀತು