ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒರಿಸ್ಸಾ : ಮತ್ತೆ ಹಿಂಸಾಚಾರ 24 ಮನೆಗಳಿಗೆ ಬೆಂಕಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒರಿಸ್ಸಾ : ಮತ್ತೆ ಹಿಂಸಾಚಾರ 24 ಮನೆಗಳಿಗೆ ಬೆಂಕಿ
ರಾಜ್ಯದ ಕಂಧಮಾಲ್ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಕೋಮಗಲಭೆ ಹಿಂಸಾಚಾರ ಮುಂದುವರಿದಿದೆ. ಇಂದು 24 ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಎರಡು ಮೃತದೇಹಗಳು ದೊರೆತಿರುವ ಹಿನ್ನೆಲೆಯಲ್ಲಿ ಮೃತರ ಸಂಖ್ಯೆ 14ಕ್ಕೇ ಏರಿದಂತಾಗಿದೆ.

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದು ,ಆಗಸ್ಟ್ 23 ರಂದು ಜಲೆಸ್‌ಪೇಟಾದಲ್ಲಿರುವ ವಿಶ್ವಹಿಂದು ಪರಿಷತ್ ನಾಯಕ ಲಕ್ಷ್ಮಣಾನಂದ್ ಸರಸ್ವತಿ ಹಾಗೂ ಅವರ ಮೂವರು ಶಿಷ್ಯರನ್ನು ಹತ್ಯೆ ಮಾಡಿದ ಸ್ಥಳಕ್ಕೆ ಭೇಟಿ ನೀಡಿದರು.

ಕೆಟ್ಟ ಹವಾಮಾನದ ಕಾರಣ ಹೆಲಿಕಾಪ್ಟರ್‌ ಪ್ರಯಾಣವನ್ನು ರದ್ದುಗೊಳಿಸಿ ರಸ್ತೆ ಮುಖಾಂತರ ತೆರಳಲು ಮುಖ್ಯಮಂತ್ರಿ ನಿರ್ಧರಿಸಿದರು ಎಂದು ಅಧಿಕಾರಿ ಮೂಲಗಳು ತಿಳಿಸಿವೆ

ರೈಕಿಯಾ ಬಳಿಯಿರುವ ಪೆಟಾಪಂಗಾ ಗ್ರಾಮದ ಬಳಿ ಎರಡು ಶವಗಳು ದೊರೆತಿದ್ದು, ಇದರಿಂದಾಗಿ ಮೃತರಾದವರ ಸಂಖ್ಯೆ 14ಕ್ಕೆ ಏರಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸುರೇಶ್ ಮೊಹಾ ಪಾತ್ರಾ ತಿಳಿಸಿದ್ದಾರೆ.

ಕತ್ರಿಂಗಿಯಾ,ಕಾನಿಬಲಿ, ಭಘದುಂಗ್ರಿ ಮತ್ತು ಗೋಚಾಪಾಡಾ ಪಂಚಾಯತ್ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಸಾವು ನೋವುಗಳ ವರದಿಯಾಗಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತಷ್ಟು
ಅಣು ಒಪ್ಪಂದ: ಪ್ರಧಾನಿ ,ಸೋನಿಯಾ ಚರ್ಚೆ
ಕೃಷ್ಣಮೃಗ ಪ್ರಕರಣ: ಮಾಜಿ ಸಚಿವ ಆತ್ರಾಮ್ ಬಂಧನ
ಶಾಂತಿ ಸೂತ್ರ: ಸಂಘರ್ಷ ಸಮಿತಿ ತಿರಸ್ಕಾರ
ಕುಸೇಲನ್‌ಗ್ಯಾಕೋ ಟೈಮ್ ಸರಿಇಲ್ಲ!
ಬಿಹಾರ: ಪರಿಹಾರಕಾರ್ಯದ ದೋಣಿ ಮುಳುಗಿ 20 ಬಲಿ
ಉಗ್ರರ ಸುಳಿವು: ಸೇನಾಪಡೆಗಳ ಭಾರೀ ಕಾರ್ಯಾಚರಣೆ