ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮರನಾಥ್ ವಿವಾದ: ಸಫಲಗೊಂಡ ಮಾತುಕತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮರನಾಥ್ ವಿವಾದ: ಸಫಲಗೊಂಡ ಮಾತುಕತೆ
ಅಮರನಾಥ್ ಯಾತ್ರೆಯ ಅವಧಿಯಲ್ಲಿ 40 ಎಕರೆ ಜಮೀನನ್ನು ತಾತ್ಕಾಲಿಕವಾಗಿ ಬಳಸಲು ಅಮರನಾಥ್ ದೇವಾಲಯ ಮಂಡಳಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರಿಂದ ನೇಮಕಗೊಂಡ ತಂಡವು ಅನುಮತಿ ನೀಡುವುದರೊಂದಿಗೆ, ಕಳೆದ 61 ದಿನಗಳ ಕಾಲ ನಡೆಯುತ್ತಿದ್ದ ಅಮರನಾಥ್ ಭೂ ವಿವಾದದ ಕುರಿತಾದ ಪ್ರತಿಭಟನೆಯನ್ನು ಅಮರನಾಥ್ ಸಮಿತಿಯು ಹಿಂಪಡೆದುಕೊಂಡಿದೆ.

ಶ್ರೀ ಅಮರವಾಥ್ ಸಂಘರ್ಷ ಸಮಿತಿ ಮತ್ತು ರಾಜ್ಯ ಸರಕಾರದಿಂದ ನೇಮಕಗೊಂಡ ನಾಲ್ಕು ಸದಸ್ಯರನ್ನೊಳಗೊಂಡ ತಂಡಗಳ ನಡುವೆ ಆರು ಗಂಟೆಗಳ ಕಾಲ ನಡೆದ ನಾಲ್ಕನೇ ಸುತ್ತಿನ ಮಾತುಕತೆಯ ನಂತರ, ಜಮೀನನ್ನು ತಾತ್ಕಾಲಿಕವಾಗಿ ಬಳಸುವ ಒಪ್ಪಂದಕ್ಕೆ ಉಭಯ ತಂಡಗಳು ಸಹಿ ಹಾಕಿದವು.

ಅಮರನಾಥ್ ಪವಿತ್ರ ಮಂಡಳಿಗೆ ಯಾತ್ರೆಯ ಸಮಯದಲ್ಲಿ ಭೂಮಿಯನ್ನು ತಾತ್ಕಾಲಿಕವಾಗಿ ಬಳಸಲು ಸರಕಾರವು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಲು ಈ ಮಾತುಕತೆಯಲ್ಲಿ ನಿರ್ಧರಿಸಲಾಯಿತು.

ಸದ್ಯಕ್ಕೆ ಪ್ರತಿಭಟನೆಯನ್ನು ಅಮಾನತ್ತುಗೊಳಿಸಲಾಗಿದ್ದು, ಇನ್ನೂ ಕೆಲವು ಬೇಡಿಕೆಗಳ ಪೂರೈಕೆಯು ಬಾಕಿ ಇರುವುದರಿಂದ ಇದು ಪ್ರತಿಭಟನೆಯ ಸಂಪೂರ್ಣ ಅಂತ್ಯವಲ್ಲ ಎಂದು ಸಮಿತಿಯ ಮುಖ್ಯಸ್ಥ ಲೀಲಾ ಕರಣ್ ಶರ್ಮ ಸಭೆಯ ನಂತರ ತಿಳಿಸಿದರು.

ಸರಕಾರದ ಪರವಾಗಿ ಎಸ್.ಎಸ್.ಬ್ಲೋರಿಯಾ ಮತ್ತು ಸಮಿತಿಯ ಪರವಾಗಿ ಶರ್ಮ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಒಪ್ಪಂದದ ಪ್ರಕಾರ, ಕಾಯಿದೆಯಂತೆಯೇ ಅಮರನಾಥ್ ಮಂಡಳಿಯು ಜವಾಬ್ಧಾರಿ ನಿರ್ವಹಣೆಯನ್ನು ಮುಂದುವರಿಸಲಿದ್ದು, ರಾಜ್ಯ ಸರಕಾರದ ಬೆಂಬಲದೊಂದಿಗೆ ಅಮರನಾಥ್ ಯಾತ್ರೆಗೆ ಸಂಬಂಧಿಸಿ ಎಲ್ಲಾ ಸಿದ್ಧತೆಗಳನ್ನು ನಿರ್ವಹಿಸಲಿದೆ.
ಮತ್ತಷ್ಟು
ನೆಲಬಾಂಬ್‌ಸ್ಫೋಟ: 12 ಪೊಲೀಸರ ಹತ್ಯೆ
ಒರಿಸ್ಸಾ : ಮತ್ತೆ ಹಿಂಸಾಚಾರ 24 ಮನೆಗಳಿಗೆ ಬೆಂಕಿ
ಅಣು ಒಪ್ಪಂದ: ಪ್ರಧಾನಿ ,ಸೋನಿಯಾ ಚರ್ಚೆ
ಕೃಷ್ಣಮೃಗ ಪ್ರಕರಣ: ಮಾಜಿ ಸಚಿವ ಆತ್ರಾಮ್ ಬಂಧನ
ಶಾಂತಿ ಸೂತ್ರ: ಸಂಘರ್ಷ ಸಮಿತಿ ತಿರಸ್ಕಾರ
ಕುಸೇಲನ್‌ಗ್ಯಾಕೋ ಟೈಮ್ ಸರಿಇಲ್ಲ!