ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಈಡಿಯಟ್ ಎನಿಸಿಕೊಳ್ಳುವುದು ಅಷ್ಟು ಸುಲಭವಲ್ಲ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಈಡಿಯಟ್ ಎನಿಸಿಕೊಳ್ಳುವುದು ಅಷ್ಟು ಸುಲಭವಲ್ಲ!
ಪೆದ್ದ ಅಥವಾ ದಡ್ಡ (ಈಡಿಯಟ್) ಎಂಬ ಪದವು ಅತ್ಯಂತ ಹೆಚ್ಚು ದುರ್ಬಳಕೆಗೀಡಾದ ಮತ್ತು ಮಿತಿಗಿಂತ ಹೆಚ್ಚೇ ಸರಳೀಕರಣಗೊಂಡ ಗುಣವಾಚಕ ಎಂಬುದು ಅರಿವಾಗುವುದು ಸುಪ್ರೀಂ ಕೋರ್ಟ್ ಈ ಪದಕ್ಕೆ ಶುಕ್ರವಾರ ನೀಡಿದ ವ್ಯಾಖ್ಯಾನದಿಂದ. ವ್ಯಕ್ತಿಯೊಬ್ಬನಿಗೆ ಪೆದ್ದ ಅಥವಾ ಹೆಡ್ಡ ಎಂದು ಕರೆಸಿಕೊಳ್ಳುವುದು ಬಹುತೇಕ ಅಸಾಧ್ಯ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಬದ್ಧವಾಗಿ ಪೆದ್ದ ಅಥವಾ ಹೆಡ್ಡ ಎಂದು ಕರೆಸಿಕೊಳ್ಳಬೇಕಿದ್ದರೆ, ವ್ಯಕ್ತಿಯೊಬ್ಬನಿಗೆ 20ರವರೆಗೆ ಎಣಿಸಲು ಬರಬಾರದು, ಆತ ವಾರದ ಏಳು ದಿನಗಳನ್ನು ಹೇಳಲು ಅಸಮರ್ಥನಾಗಿರುತ್ತಾನೆ ಮತ್ತು ಒಬ್ಬರ ತಂದೆ-ತಾಯಿಯರ ಹೆಸರು ನೆನಪಿಸಿಕೊಳ್ಳುವುದಕ್ಕೂ ಅಸಮರ್ಥನಾಗಿರುತ್ತಾನೆ ಎಂಬುದು ಶುಕ್ರವಾರ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಸಾರಾಂಶ.

ಭಾರತೀಯ ದಂಡ ಸಂಹಿತೆಯ 84ನೇ ವಿಧಿಯ ಅನುಸಾರ, ವ್ಯಕ್ತಿಯೊಬ್ಬ ಅಸ್ವಸ್ಥ ಮನಸ್ಸು ಹೊಂದಿದ್ದರೆ ಅಥವಾ ಅಪರಾಧ ಕೃತ್ಯದ ಲಕ್ಷಣವನ್ನು ಹಾಗೂ ಅದು ಕಾನೂನಿಗೆ ವಿರೋಧ ಎಂಬ ತಥ್ಯವನ್ನು ಗ್ರಹಿಸಲು ಅಸಮರ್ಥನಾದರೆ, ಆತ ಶಿಕ್ಷೆಗೆ ಅರ್ಹನಲ್ಲ.

ಸುಪ್ರೀಂಕೋರ್ಟು ಮಾನಸಿಕವಾಗಿ ಅಸ್ವಸ್ಥರಿರುವವರನ್ನು ಹೆಡ್ಡರು, ತೀವ್ರ ಅಸ್ವಸ್ಥರು, ಉನ್ಮತ್ತರು ಅಥವಾ ಭ್ರಮೆಪೀಡಿತರು ಹಾಗೂ ಕುಡುಕರು ಎಂದು ನಾಲ್ಕು ರೀತಿಯಲ್ಲಿ ವರ್ಗೀಕರಿಸಿದೆ.

"ಹೆಡ್ಡರು ಎಂದರೆ ಜನ್ಮದಾರಭ್ಯವಾಗಿ, ಶಾಶ್ವತ ಚಾಂಚಲ್ಯದ ಮೂಲಕ, ಹುಚ್ಚಿನ ಆವೇಶಗಳ ನಡುವೆ ಬುದ್ಧಿ ಸ್ಥಿಮಿತವಾಗಿರುವ ಕಾಲಮಿತಿಗಳಿಲ್ಲದೆ ಬುದ್ಧಿವಿಕಲ್ಪದ ಸ್ಮರಣೆಯುಳ್ಳವರು. ಹೆಡ್ಡರು ಅನ್ನಿಸಿಕೊಳ್ಳುವವರು 20ರವರೆಗೆ ಅಂಕಿಗಳನ್ನು ಎಣಿಸಲಾರದವರು, ಅಥವಾ ವಾರದ ದಿನಗಳನ್ನು ಹೆಸರಿಸಲಾರದವರು, ಅಥವಾ ತಮ್ಮ ತಂದೆ ಅಥವಾ ತಾಯಿ ಮತ್ತಿತರರ ಬಗ್ಗೆ ತಿಳಿಯದವರು" ಎಂದು ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್ ಮತ್ತು ಎಂ.ಕೆ.ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿದೆ. ತಾವು ಹೆಡ್ಡರು ಅಥವಾ ಅಸ್ವಸ್ಥ ಮನಸ್ಸಿನವರು ಎಂಬುದನ್ನು ಸಾಬೀತುಪಡಿಸುವುದು ಆಪಾದಿತರಿಗೆ ಬಿಟ್ಟ ವಿಷಯ ಎಂದೂ ನ್ಯಾಯಪೀಠ ಹೇಳಿದೆ.

ಮಧ್ಯಪ್ರದೇಶದ ಹರಿ ಸಿಂಗ್ ಗೊಂಡ ಎಂಬವರು ತಮ್ಮ ಮಾವನ ತಂದೆಯನ್ನು ಕೊಂದ ಆರೋಪ ಎದುರಿಸುತ್ತಿದ್ದು, ಹೆಡ್ಡತನದ ಆಧಾರದಲ್ಲಿ ತಾನು ನಿರಪರಾಧಿ ಎಂದು ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಈ ವಿಶ್ಲೇಷಣೆ ಹೊರಬಿದ್ದಿದ್ದು, ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟು ಎತ್ತಿ ಹಿಡಿದಿದೆ.

ತನಿಖಾ ಏಜೆನ್ಸಿಗೆ ಮಾನಸಿಕ ಅಸ್ವಾಸ್ಥ್ಯದ ಚರಿತ್ರೆ ಎದುರಾಗಿದ್ದರೆ, ಆರೋಪಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸುವುದು ಅದರ ಕರ್ತವ್ಯ. ವೈದ್ಯಕೀಯ ತಪಾಸಣೆ ನಡೆಸದಿದ್ದರೆ, ಸಂದೇಹದ ಲಾಭವನ್ನು ಆರೋಪಿಗೆ ನೀಡಬೇಕಾಗುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಕೆಲವು ಬಾರಿ ಆರೋಪಿಯು ವಿಚಿತ್ರವಾದ ವರ್ತನೆಯನ್ನು ತೋರ್ಪಡಿಸಿದ್ದರೂ, ಆತ ಮಾನಸಿಕ ಅಸ್ವಸ್ಥ ಎಂಬುದನ್ನು ಒಪ್ಪಿಕೊಳ್ಳಲು ಮಧ್ಯಪ್ರದೇಶ ನ್ಯಾಯಾಲಯ ನಿರಾಕರಿಸಿತ್ತು. ಶುಕ್ರವಾರದ ತೀರ್ಪು, ಅಸ್ವಸ್ಥ ಮನಸ್ಸಿನ ಮತ್ತು ಉದ್ದೇಶರಹಿತ ಕೃತ್ಯಗಳ ನಡುವೆ ವ್ಯತ್ಯಾಸವನ್ನು ಎತ್ತಿ ತೋರಿಸಿದಂತಾಗಿದೆ.

ನ್ಯಾಯಬದ್ಧವಾದ ಚಿತ್ತವಿಕಲ್ಪ ಕುರಿತಾದ ಸಾಕ್ಷ್ಯ ಅಥವಾ ಮನವಿಯಿಲ್ಲದ ಹೊರತು, ಅಪರಾಧ ಕೃತ್ಯಕ್ಕೆ ಯಾವುದೇ ಉದ್ದೇಶವಿಲ್ಲದಿರುವುದು, ಈ ಕೇಸನ್ನು ಸೆಕ್ಷನ್ 84ರ ಅಡಿಗೆ ತರಲು ಪೂರಕವಾಗದು ಎಂದಿದೆ ನ್ಯಾಯಾಲಯ.
ಮತ್ತಷ್ಟು
ಕಾಲುವೆ ಒಡೆತ: ಹೆಚ್ಚಿದ ಕೋಸಿ ಪ್ರವಾಹ
ಅಮರನಾಥ್ ವಿವಾದ: ಸಫಲಗೊಂಡ ಮಾತುಕತೆ
ನೆಲಬಾಂಬ್‌ಸ್ಫೋಟ: 12 ಪೊಲೀಸರ ಹತ್ಯೆ
ಒರಿಸ್ಸಾ : ಮತ್ತೆ ಹಿಂಸಾಚಾರ 24 ಮನೆಗಳಿಗೆ ಬೆಂಕಿ
ಅಣು ಒಪ್ಪಂದ: ಪ್ರಧಾನಿ ,ಸೋನಿಯಾ ಚರ್ಚೆ
ಕೃಷ್ಣಮೃಗ ಪ್ರಕರಣ: ಮಾಜಿ ಸಚಿವ ಆತ್ರಾಮ್ ಬಂಧನ