ಸಿಂಗೂರ್ ವಿವಾದದ ಕುರಿತಾಗಿ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸುವಂತೆ ಪಶ್ಚಿಮ ಬಂಗಾಲ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದಾರೆ.
ಸಿಂಗೂರ್ ವಿವಾದವನ್ನು ಶೀಘ್ರದಲ್ಲೇ ಬಗೆಹರಿಸಬೇಕಾಗಿರುವುದರಿಂದ, ಮಾತುಕತೆಯಲ್ಲಿ ಭಾಗವಹಿಸುವಂತೆ ಬ್ಯಾನರ್ಜಿ ಅವರಿಗೆ ರಾಜ್ಯಪಾಲರು ಪತ್ರದಲ್ಲಿ ಒತ್ತಾಯಿಸಿರುವುದಾಗಿ, ಖಾಸಗಿ ಮಾಧ್ಯಮಗಳು ಬಹಿರಂಗಗೊಳಿಸಿವೆ.
ಟಾಟಾ ಯೋಜನೆಯ ಕಾರ್ಯ ಸ್ಥಗಿತಕ್ಕೆ ಕಾರಣವಾದ ತೃಣಮೂಲ ಕಾಂಗ್ರೆಸ್‌ನ ಮುಂದುವರಿದ ಪ್ರತಿಭಟನೆಯ ಮುಂದಾಗಿ ಈ ಪತ್ರವನ್ನು ಕಳುಹಿಸಲಾಗಿದೆ.
ಏತನ್ಮಧ್ಯೆ, ರಾಜ್ಯಪಾಲರು ಕಳುಹಿಸಿರುವ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾನರ್ಜಿ, ತನ್ನ ಪಕ್ಷದೊಂದಿಗೆ ಹಾಗೂ ಪ್ರತಿಭಟನಾ ಗುಂಪುಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಲದಿಂದ ಟಾಟಾ ಹೋರಹೋಗಬೇಕೆಂದು ಬೆದರಿಕೆಯೊಡ್ಡಿ ತೃಣಮೂಲ ಕಾಂಗ್ರೆಸ್ ಪಕ್ಷವು ಪ್ರಾರಂಭಿಸಿದ್ದ ಪ್ರತಿಭಟನೆಯು ಇನ್ನೂ ಅಂತ್ಯಕಂಡಿಲ್ಲ. ಪ್ರತಿಭಟನೆಯ ಫಲವಾಗಿ ಟಾಟಾ ಕಾರ್ಖಾನೆಯಲ್ಲಿನ ಕಾರ್ಯವು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
|