ಅಮರನಾಥ ವಿವಾದದ ಕುರಿತಂತೆ ಅಮರನಾಥ ಸಂಘರ್ಷ ಸಮಿತಿ ಮತ್ತು ಜಮ್ಮು ಮತ್ತು ಕಾಶ್ಮೀರ ಸರಕಾರದ ನಡುವಿನ ಹೊಂದಾಣಿಕೆಯು ಮಿಶ್ರ ಪ್ರತಿಕ್ರಿಯೆಯನ್ನು ಉಂಟುಮಾಡಿದೆ. ಪಿಡಿಪಿ ಪಕ್ಷವು ಇದೊಂದು ಏಕಪಕ್ಷೀಯ ನಿರ್ಧಾರ ಎಂದು ಟೀಕಿಸಿದರೆ, ನ್ಯಾಶನಲ್ ಕಾನ್ಫರೆನ್ಸ್ ಇದೊಂದು ಉತ್ತಮ ಬೆಳವಣಿಗೆ ಎಂದಿದೆ.
ಅಮರನಾಥ ದೇವಾಲಯವು ಜಮೀನನ್ನು ತಾತ್ಕಾಲಿಕವಾಗಿ ಉಪಯೋಗಿಸಬಹುದು ಎಂಬ ಒಪ್ಪಂದಕ್ಕೆ ಶ್ರೀ ಅಮರನಾಥ ಸಂಘರ್ಷ ಸಮಿತಿ ಮತ್ತು ಸರಕಾರ ಸಹಿ ಹಾಕಿರುವುದನ್ನು ವಿರೋಧಿಸಿರುವ ಪಿಡಿಪಿ, ಇದು ರಾಜ್ಯದ ಬಹು ಸಂಖ್ಯಾತರ ಸೂಕ್ಷ್ಮತೆಯನ್ನು ತಳ್ಳಿಹಾಕಿದೆ ಎಂದು ಆಪಾದಿಸಿದೆ.
ಈ ನಿರ್ಧಾರವನ್ನು ಕೇಂದ್ರವು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದು, ಇದು ಬಹು ಸಂಖ್ಯಾತ ಪಂಗಡಗಳ ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ಈ ಕುರಿತಾದ ಯಾವುದೇ ನಿರ್ಧಾರವನ್ನು ಒಮ್ಮತದ ಮೂಲಕ ಸರಕಾರವು ಕೈಗೊಳ್ಳಬೇಕಿತ್ತು ಎಂದು ಅವರು ಹೇಳಿದ್ದಾರೆ.
|