ಕೋಮುದಳ್ಳುರಿಯಿಂದ ತತ್ತರಿಸಿರುವ ಒರಿಸ್ಸಾದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಒರಿಸ್ಸಾ ವಿಎಚ್‌ಪಿ ಮುಖಂಡ ಸ್ವಾಮಿ ಲಕ್ಷ್ಮಣಾನಂದ ಸ್ವಾಮೀಜಿ ಅವರ ಹತ್ಯೆ ಹೊಣೆ ಹೊತ್ತುಕೊಂಡಿರುವ ಮಾವೋವಾದಿಗಳು ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸೆ ಮುಂದುವರಿದರೆ ಮತ್ತಷ್ಟು ದಾಳಿ ನಡೆಸುವುದಾಗಿ ಎಚ್ಚರಿಸಿದೆ.
ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ನಿರಂತರ ಕಿರುಕುಳದ ಹಿನ್ನೆಲೆಯಲ್ಲಿ ಲಕ್ಷ್ಮಣಾನಂದ ಸರಸ್ವತಿಯವರಂಥ ಧರ್ಮಾಂಧರನ್ನು ಶಿಕ್ಷೆಗೊಳಪಡಿಸಲು ಸಿಪಿಐ(ಮಾವೋವಾದಿ) ನಿರ್ಧರಿಸಿದೆ ಎಂದು ಇಲ್ಲಿ ಬಿಡುಗಡೆ ಮಾಡಿರುವ ಪಕ್ಷದ ಪ್ರಕಟಣೆಯಲ್ಲಿ ಘೋಷಿಸಿದೆ.
ವಿಎಚ್‌ಪಿ ನಾಯಕ ಸರಸ್ವತಿ ಮೇಲೆ ದಾಳಿ ನಡೆಸಿರುವುದು ಮಾವೋವಾದಿಗಳಲ್ಲ, ಕ್ರೈಸ್ತರು ಎಂದು ಪ್ರವೀಣ್ ತೊಗಾಡಿಯಾರಂಥ ಸಂಘ ಪರಿವಾರದ ಮುಖಂಡರು ಸುಳ್ಳು ಹೇಳಿ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ಅದು ಆಪಾದಿಸಿದೆ.
|