ಖ್ಯಾತ ಅಣುವಿಜ್ಞಾನಿ ಡಾ| ಪ್ಲಾಸಿಡ್ ರಾಡ್ರಿಗಸ್ ಅವರು ಸೋಮವಾರ ನಿಧನ ಹೊಂದಿದ್ದಾರೆ.
ಅವರು ಪೊಕ್ರಾನ್‌ನಲ್ಲಿ 1998ರಲ್ಲಿ ನಡೆಸಲಾದ ಹೈಡ್ರೋಜನ್ ಬಾಂಬ್ ಪರೀಕ್ಷೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.
ಕಲ್ಪಾಕಂನ ಇಂದಿರಾಗಾಂಧಿ ಅಣುಸಂಶೋಧನಾ ಕೇಂದ್ರ(ಐಜಿಸಿಎಆರ್)ದ ಮಾಜಿ ನಿರ್ದೇಶಕರಾಗಿದ್ದ ರಾಡ್ರಿಗಸ್ ಅವರು 1960ರಲ್ಲಿ ಬಾಬಾ ಅಣು ಸಂಶೋಧನಾ ಕೇಂದ್ರಕ್ಕೆ ಸೇರ್ಪಡೆಯಾಗಿದ್ದರು. ಬಳಿಕ ಐಜಿಸಿಎಆರ್‌ನಲ್ಲಿ ಸೇವೆ ಸಲ್ಲಿಸಿದ್ದು, 1992ರಿಂದ 2000 ತನಕ ಕೇಂದ್ರದ ನಿರ್ದೇಶಕರಾಗಿದ್ದರು.
ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಇವರು ರಾಷ್ಟ್ರದ ಅಣುತಂತ್ರಜ್ಞಾನಕ್ಕೆ ಅಗಾಧವಾದ ಕೊಡುಗೆ ನೀಡಿದ್ದಾರೆ. ಅಲ್ಲದೆ ಹಲವಾರು ಕಿರಿಯ ವಿಜ್ಞಾನಿಗಳಿಗೆ ಮಾರ್ಗದರ್ಶಕರಾಗಿದ್ದರು.
ಬಿರ್ಲಾ ಚಿನ್ನದ ಪದಕ, ವಾಸ್ವಿಕ್ ಸಂಶೋಧನಾ ಪ್ರಶಸ್ತಿ, ಇಂಡಿನ್ ಇನ್ಸ್‌ಸ್ಟಿಟ್ಯೂಟ್ ಆಫ್ ವೆಲ್ಡಿಂಗ್ ಮತ್ತು ಇಂಡಿಯನ್ ನ್ಯೂಕ್ಲಿಯರ್ ಸೊಸೈಟಿಯ ಜೀವಮಾನದ ಪ್ರಶಸ್ತಿ ಸೇರಿದಂತೆ ಇನ್ನೂ ಹಲವಾರು ಪುರಸ್ಕಾರಗಳನ್ನು ಅವರು ಪಡೆದಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
|