ಮುಸಲ್ಮಾನ ಬಾಂಧವರು ಉಪವಾಸ ವ್ರತ ಕೈಗೊಳ್ಳುವ ಪವಿತ್ರ ರಮ್ಜಾನ್ ಮಾಸವು ಮಂಗಳವಾರದಿಂದ ಆರಂಭವಾಗಲಿದೆ.
'ಚಂದ್ರ ಇಂದು ಗೋಚರಿಸಿದ್ದಾನೆ. ಆದುದರಿಂದ ಉಪವಾಸ ವ್ರತವು ನಾಳೆಯಿಂದ ಆರಂಭವಾಗುತ್ತದೆ' ಎಂದು ಫತೇಪುರಿ ಮಸೀದಿಯ ಶಾಹಿ ಇಮಾಮ್ ಮೌಲಾನಾ ಮುಫ್ತಿ ಮುಕರ್ರಮ್ ಅವರು ಸೋಮವಾರ ಹೇಳಿದ್ದಾರೆ.
ಮುಫ್ತಿ ಮುಕರ್ರಮ್ ನೇತೃತ್ವದಲ್ಲಿ, ಉಲೆಮಾಗಳು ಮತ್ತು ಮುಸ್ಲಿಂ ಮತ ವಿದ್ವಾಂಸರು ಸೇರಿದ್ದ ರಾಯತ್ ಹಿಲಾಲ್ ಸಮಿತಿ ಸಭೆಯಲ್ಲಿ ಇದನ್ನು ಘೋಷಿಸಲಾಯಿತು.
ಮುಸಲ್ಮಾನವು ಮಾಸವಿಡೀ ಉಪವಾಸ ಆಚರಿಸಲಿದ್ದು, ಈದ್ ಆಚರಣೆಯೊಂದಿಗೆ ಉಪವಾಸ ಕೊನೆಗೊಳಿಸುತ್ತಾರೆ.
|