ಟಾಟಾ ನ್ಯಾನೋ ವಿರುದ್ಧ ಸಿಂಗೂರಿನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತನ್ನ ನಿಲುವನ್ನು ಮೃದುಗೊಳಿಸಿದ್ದಾರೆ,
ಸಿಂಗೂರ್ ಸ್ಥಾವರದಲ್ಲಿ ಟಾಟಾ ಮೋಟಾರ್ಸ್ ನ್ಯಾನೋ ಯೋಜನೆ ಕಾರ್ಯವನ್ನು ಪ್ರಾರಂಭಿಸಬಹುದು ಎಂದು ಮಮತಾ ತಿಳಿಸಿದ್ದು, ಪ್ರತಿಭಟನೆಯಿಂದ ಕೃಷಿ ಪ್ರದೇಶಗಳಿಗೆ ಹಾನಿ ಉಂಟಾಗುವುದು ತನಗೆ ಇಷ್ಟವಿಲ್ಲ ಎಂದಿದ್ದಾರೆ.
ಅದಾಗ್ಯೂ, ಪೂರಕ ಕೇಂದ್ರವನ್ನು ನೂತನ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಮಮತಾ ಎಂದು ಹೇಳಿರುವ ಮಮತಾ ಟಾಟಾ ಮೋಟಾರ್ಸ್ ಕಾರ್ಯ ಮತ್ತು ಈ ಪ್ರದೇಶದಲ್ಲಿನ ಕೃಷಿ ಕಾರ್ಯವು ಜೊತೆಜೊತೆಯಲ್ಲಿಯೇ ಸಾಗಬೇಕು ಎಂದು ಅಭಿಪ್ರಾಯಿಸಿದ್ದಾರೆ.
ಪಶ್ಚಿಮ ಬಂಗಾಳ ಸರಕಾರವು ರೈತರಿಗೆ ಜಮೀನನ್ನು ಹಿಂತಿರುಗಿಸಬೇಕಂಬ ತೃಣಮೂಲ ಕಾಂಗ್ರೆಸ್ ಪಕ್ಷದ ಬೇಡಿಕೆಯನ್ನು ಪೂರೈಸುವವರೆಗೆ ತಾನು ಮಾತುಕತೆಗೆ ತಯಾರಿಲ್ಲ ಎಂದು ಹೇಳಿಕೊಳ್ಳುತ್ತಿದ್ದ ಮಮತಾ ಬ್ಯಾನರ್ಜಿ, ಸಿಂಗೂರ್ ವಿವಾದವನ್ನು ಬಗೆಹರಿಸಲು ಪ್ರಾರಂಭಿಕ ಮಾತುಕತೆಗೆ ಬಂಗಾಳ ರಾಜ್ಯಪಾಲರನ್ನು ಒತ್ತಾಯಿಸುತ್ತಿರುವುದು ಕುತೂಹಲಕಾರಿಯಾಗಿದೆ.
ಪೂರಕ ಕೇಂದ್ರವನ್ನು ಟಾಟಾ ಮೋಟಾರ್ಸ್ ಎದುರು ಭಾಗದಲ್ಲಿ ಸ್ಥಾಪಿಸಿ, ರೈತರಿಗೆ ವಿವಾದಿತ ಪ್ರದೇಶದಲ್ಲಿ ಕೃಷಿ ಕಾರ್ಯ ಪ್ರಾರಂಭಿಸಲು ಅನುವು ಮಾಡಿಕೊಡಬೇಕು ಎಂದು ಬ್ಯಾನರ್ಜಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.
|