ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಿಹಾರವಾಯಿತು, ಅಸ್ಸಾಮ‌ೂ ಮುಳುಗುತ್ತಿದೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಹಾರವಾಯಿತು, ಅಸ್ಸಾಮ‌ೂ ಮುಳುಗುತ್ತಿದೆ
PTI
ಬಿಹಾರದಂತೆಯೇ ಅಸ್ಸಾಮ್ ಕೂಡ ಪ್ರವಾಹ ಪೀಡಿತವಾಗಿದ್ದು 15 ಮಂದಿ ಸಾವಿಗೀಡಾಗಿದ್ದು, ಸುಮಾರು 10 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಪರಿಹಾರ ಕಾರ್ಯ ಕೈಗೊಳ್ಳಲಾಗಿದ್ದು, ಸೈನಿಕರು ಯುದ್ಧೋಪಾದಿಯಲ್ಲಿ ಪ್ರವಾಹ ಪೀಡಿತರಿಗೆ ನೆರವು ನೀಡುತ್ತಿದ್ದಾರೆ.

ರಾಜ್ಯದ 27 ಜಿಲ್ಲೆಗಳಲ್ಲಿ 16 ಜಿಲ್ಲೆಗಳು ನೆರೆಹಾನಿಗೀಡಾಗಿವೆ. ಸುಮಾರು ಒಂದು ಮಿಲಿಯ ಜನತೆಯನ್ನು ಸ್ಥಳಾಂತರಿಸಲಾಗಿದ್ದು, ಪರಿಸ್ಥಿತಿಯು ಗಂಭೀರವಾಗಿದೆ ಎಂದು ಅಸ್ಸಾಮಿನ ಪರಿಹಾರ ಮತ್ತು ಪುನರ್ವಸತಿ ಸಚಿವ ಭೂಮೀಂದರ್ ಬರ್ಮನ್ ಹೇಳಿದ್ದಾರೆ.

1,346 ಗ್ರಾಮಗಳ 2,69,609 ಹೆಕ್ಟೇರ್ ಜಾಗವು ಜಲಾವೃತವಾಗಿದೆ. ಈ ವರ್ಷದಲ್ಲಿ ಅಸ್ಸಾಮನ್ನು ಪ್ರವಾಹ ಬಾಧಿಸುತ್ತಿರುವುದು ಇದು ದ್ವಿತೀಯ ಬಾರಿಯಾಗಿದೆ.

ಕಾಮರೂಪ, ಲಕಿಂಪುರ, ದೇಮಜ್ ಮತ್ತು ಮೊರಿಗಾಂವ್ ಜಿಲ್ಲೆಗಳಲ್ಲಿ ಪರಿಸ್ಥಿತಿ ತೀರಾ ಅಪಾಯಕಾರಿಯಾಗಿದೆ ಎಂದು ಬರ್ಮನ್ ಹೇಳಿದ್ದಾರೆ.

ಬ್ರಹ್ಮಪುತ್ರ ನದಿ ಉಕ್ಕಿ ಹರಿಯುತ್ತಿರುವ ಕಾರಣ ರಸ್ತೆ, ರೈಲ್ವೇ ಹಳಿಗಳು, ಸೇತುವೆ ಎಲ್ಲವೂ ಜಲಾವೃತವಾಗಿವೆ. ಸಂತ್ರಸ್ಥರನ್ನು ಬೇರೆಡೆಗೆ ಸ್ಥಳಾಂತರಿಸಲು ವಾಯುಪಡೆಯು ಹೆಲಿಕಾಫ್ಟರ್ ಬಳಸುತ್ತಿದ್ದರೆ, ಸೇನೆಯು ದೋಣಿಗಳನ್ನು ಬಳಸುತ್ತಿದೆ.

ಬ್ರಹ್ಮಪುತ್ರ ಹಾಗೂ ಅದರ ಉಪನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ ಎಂದು ಎಂದು ಕೇಂದ್ರ ಜಲ ಆಯೋಗದ ಬುಲೆಟಿನ್ ತಿಳಿಸಿದೆ.

ಪ್ರತಿ ಮಳೆಗಾಲವೂ ಅಸ್ಸಾಂ ಸಂಕಷ್ಟಕ್ಕೀಡಾಗುತ್ತಿದ್ದು, ಗ್ರಾಮಗಳ ಮುಳುಗಡೆ, ಭತ್ತದ ಗದ್ದೆಗಳು ಜಲಾವೃತವಾಗುವುದು, ಜಾನುವಾರುಗಳ ಮುಳುಗಡೆ ಸಂಭವಿಸುತ್ತಲೇ ಇರುತ್ತದೆ. ಇದಲ್ಲದೆ ಪ್ರತೀ ವರ್ಷ ಜೀವ ಹಾನಿಯೂ ಸಂಭವಿಸುತ್ತಿದ್ದು, 2004ರಲ್ಲಿ 200ಕ್ಕಿಂತಲೂ ಅಧಿಕ ಮಂದಿ ಅಸ್ಸಾಂ ಪ್ರವಾಹದಲ್ಲಿ ಪ್ರಾಣ ತೆತ್ತಿದ್ದಾರೆ.
ಮತ್ತಷ್ಟು
ಸಿಂಗೂರ್ ವಿವಾದ: ನಿಲುವು ಬದಲಿಸಿದ ಮಮತಾ
ಚಂದ್ರ ದರ್ಶನ: ಮಂಗಳವಾರದಿಂದ ರಮ್ಜಾನ್ ಉಪವಾಸ
ಸಹಜ ಸ್ಥಿತಿಯತ್ತ ಮರಳುತ್ತಿರುವ ಜಮ್ಮು
ಅಣು ವಿಜ್ಞಾನಿ ರಾಡ್ರಿಗಸ್ ವಿಧಿವಶ
ಬಿಹಾರದಲ್ಲಿ ಹೆಚ್ಚಿದ ಪರಿಹಾರ ಕಾರ್ಯ
ಕೇಂದ್ರಕ್ಕೆ ತೃತೀಯ ಪರ್ಯಾಯವೊಂದು ಬೇಕಾಗಿದೆ: ಬುದ್ದದೇವ್