ಕಾಶ್ಮೀರಾದ್ಯಂತ ಇಂದು ಸಂಪೂರ್ಣವಾಗಿ ಕರ್ಫ್ಯೂ ಹಿಂತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರ ಕಣಿವೆಯ ಯೂವುದೇ ಭಾಗದಲ್ಲಿ ಕರ್ಫ್ಯೂ ಹೇರಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಸಮನ್ವಯ ಸಮಿತಿಯು ಆಗಸ್ಟ್ 24ರಂದು ಕರೆ ನೀಡಿದ್ದ 'ಲಾಲ್ ಚೌಕ್ ಚಲೋ' ಹಿನ್ನೆಲೆಯಲ್ಲಿ ಕರ್ಫ್ಯೂ ಹೇರಲಾಗಿತ್ತು. ಆ ಬಳಿಕ ಕಾಶ್ಮೀರದಲ್ಲಿ ಚಳುವಳಿ ವಿಕೋಪಕ್ಕೆ ಹೋಗಿದ್ದ ಕಾರಣ ಕಾಶ್ಮೀರದಲ್ಲಿ ಕರ್ಫ್ಯೂ ಹೇರಲಾಗಿತ್ತು. ಇದೀಗ ಪರಿಸ್ಥಿತಿ ಸಹಜತೆಯತ್ತ ಮರಳುತ್ತಿದ್ದು, ಕರ್ಫ್ಯೂ ಹಿಂತೆಗೆಯಲಾಗಿದೆ.
|