ಅಹಮದಾಬಾದ್ ಸರಣಿ ಸ್ಫೋಟಗಳ ರೂವಾರಿ ಅಬು ಬಶೀರ್, ಜೈಪುರ ಸರಣಿ ಸ್ಫೋಟಗಳ ಕುರಿತ ಇಮೇಲ್ ಸಂದೇಶವನ್ನು ಮಾಧ್ಯಮಗಳಿಗೆ ಕಳುಹಿಸಿದ್ದ ಎಂದು ಜೈಪುರ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಯುಪಿ ಭಯೋತ್ಪಾದನಾ ವಿರೋಧಿ ಪಡೆ ಮತ್ತು ಗುಜರಾತ್ ಪೊಲೀಸರ ಕಾರ್ಯಾಚರಣೆ ವೇಳೆಗೆ, ಕಳೆದ ತಿಂಗಳು ಅಬು ಬಶೀರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಸಿಮಿ ಕಾರ್ಯಕರ್ತ ಶಾಬಾಜ್ ಹುಸೇನ್ ತಯಾರಿಸಿದ್ದ ಸಂದೇಶವನ್ನು ಬಶೀರ್ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶಾಬಾಜ್ ಸಹ ಜೈಪುರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಬಂಧನಕ್ಕೀಡಾಗಿದ್ದಾನೆ.
ಮೇ 13ರಂದು ನಡೆಸಲಾಗಿರುವ ಜೈಪುರ ಸ್ಫೋಟದಲ್ಲೂ ತನ್ನ ಕೈವಾಡದ ಕುರಿತು ಬಶೀರ್ ತನಿಖೆಯ ವೇಳೆಗೆ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.
|