ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿಂಗೂರ್‌ನಲ್ಲಿ 'ನ್ಯಾನೋ' ಕಾರ್ಯ ಸ್ಥಗಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗೂರ್‌ನಲ್ಲಿ 'ನ್ಯಾನೋ' ಕಾರ್ಯ ಸ್ಥಗಿತ
ಸಿಂಗೂರ್‌ನಲ್ಲಿರುವ ನ್ಯಾನೋ ಕಾರ್ ಘಟಕ ಇದೀಗ ಕಂಪೆನಿಯ ಬೇರೆ ಘಟಕದಲ್ಲಿ ಉತ್ಪಾದನೆ ಮಾಡುವತ್ತ ಚಿಂತನೆ ನಡೆಸಿರುವುದಾಗಿ ಹೇಳಿರುವ ಟಾಟಾ, ಸಿಂಗೂರ್ ಘಟಕದಲ್ಲಿ ನ್ಯಾನೋ ಉತ್ಪಾದನೆ ಕಾರ್ಯವನ್ನು ಸ್ಥಗಿತಗೊಳಿಸಿರುವುದಾಗಿ ಹೇಳಿದೆ.

ನಿರಂತರ ಪ್ರತಿಭಟನೆಯಿಂದ ಕಂಗೆಟ್ಟಿರುವ ಟಾಟಾ ಘಟಕ,ಇದೀಗ ಸದ್ಯದ ಪರಿಸ್ಥಿತಿಯಲ್ಲಿ ನ್ಯಾನೋ ತಯಾರಿಕೆಗೆ ಕಂಪೆನಿ ಪರ್ಯಾಯ ದಾರಿಯನ್ನು ನೋಡಿಕೊಳ್ಳಲಿದ್ದು, ಸಿಂಗರ್ ಘಟಕದಲ್ಲಿ ಕಾರ್ಯವನ್ನು ನಿಲ್ಲಿಸಿರುವುದಾಗಿ ಕಂಪನಿ ಮಂಗಳವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಸಿಂಗೂರ್‌ನಲ್ಲಿರುವ ಘಟಕವನ್ನು ಸ್ಥಳಾಂತರಿಸಲಿದ್ದು,ಆ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಘಟಕ ನಿರ್ಮಾಣ ಕಾರ್ಯ ಮತ್ತು ಉಳಿದ ಕಾರ್ಯವನ್ನು ಸ್ಥಗಿತಗೊಳಿಸಿರುವುದಾಗಿ ಹೇಳಿದೆ.

ಕಂಪೆನಿಯ ನೌಕರರ ಮತ್ತು ಗುತ್ತಿಗೆ ಕಾರ್ಮಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಟಾಟಾ ಕಂಪೆನಿ ವಿವರಿಸಿದೆ.
ಮತ್ತಷ್ಟು
ಶಾರದಾ ಪ್ರಸಾದ್ ವಿಧಿವಶ
ಜೈಪುರ ಸ್ಫೋಟದ ಇಮೇಲ್ ಕಳುಹಿದ್ದು ಬಶೀರ್
ಬಿಎಂಡಬ್ಲ್ಯೂ: ಸಂಜೀವ್ ನಂದಾ ದೋಷಿ
ರಾಜಸ್ಥಾನದಲ್ಲಿ 4 ಸಿಮಿ ಕಾರ್ಯಕರ್ತರ ಬಂಧನ
ಇಂದು ಕಾಶ್ಮೀರ ಸಂಪೂರ್ಣ ಕರ್ಫ್ಯೂ ಮುಕ್ತ
ಅಪ್ರಾಪ್ತಳೊಂದಿಗೆ ದೈಹಿಕ ಸಂಬಂಧ ಅತ್ಯಾಚಾರ