ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಸ್ಸಾಂ: ಪ್ರವಾಹ ಉಲ್ಬಣ, 10 ಲಕ್ಷ ಮಂದಿ ನಿರಾಶ್ರಿತರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಸ್ಸಾಂ: ಪ್ರವಾಹ ಉಲ್ಬಣ, 10 ಲಕ್ಷ ಮಂದಿ ನಿರಾಶ್ರಿತರು
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿಯ ಭೀಕರತೆ ಉಲ್ಬಣಿಸಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಮಟ್ಟವೂ ಆತಂಕಕಾರಿಯಾಗಿ ಏರುತ್ತಿದೆ. ಜೂನ್ 1ರಿಂದೀಚೆಗೆ ರಾಜ್ಯದಲ್ಲಿ ಪ್ರವಾಹದ ಪ್ರಕೋಪಕ್ಕೆ ಸುಮಾರು 15 ಮಂದಿ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಸಾಮಾನ್ಯದಿಂದ ಭಾರೀ ಪ್ರಮಾಣದ ಮಳೆಯಾಗಿದೆ. ಈಶಾನ್ಯ ರಾಜ್ಯಗಳನ್ನು ದೇಶದ ಇತರ ರಾಜ್ಯಗಳೊಂದಿಗೆ ಬೆಸೆಯುವ ರಾಷ್ಟ್ರೀಯ ಹೆದ್ದಾರಿ -31 ಮುಳುಗಡೆಯಾಗಿದ್ದು, ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ರಾಜ್ಯಕ್ಕೆ ಅವಶ್ಯಕ ವಸ್ತುಗಳನ್ನು ಸಾಗಿಸುತ್ತಿರುವ ಟ್ರಕ್‌ಗಳು ದಾರಿಯಲ್ಲೇ ಬಾಕಿಯಾಗಿವೆ. ಮಜುಲಿ ಪ್ರದೇಶವು ಬ್ರಹ್ಮಪುತ್ರಾ ನದಿ ಪ್ರವಾಹದಿಂದ ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ.

ಮಜುಲಿ ನದಿ-ದ್ವೀಪದಲ್ಲಿ ಸುಮಾರು 1.65 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 12 ಜಿಲ್ಲೆಗಳ, 1106 ಹಳ್ಳಿಗಳ 10.278 ಲಕ್ಷ ಮಂದಿ ಪ್ರವಾಹ ಪೀಡಿತರಾಗಿದ್ದಾರೆ. ಸುಮಾರು 132 ಪರಿಹಾರ ಕೇಂದ್ರಗಳಲ್ಲಿ ಅಂದಾಜು 21 ಸಾವಿರ ಮಂದಿ ಆಶ್ರಯ ಪಡೆದಿದ್ದಾರೆ.
ಮತ್ತಷ್ಟು
ಸಿಂಗೂರಿನಿಂದ ಟಾಟಾ ಹಿಂತೆಗೆತ: ಎಡರಂಗ ಆಘಾತ
ಸಿಂಗೂರ್‌ನಲ್ಲಿ 'ನ್ಯಾನೋ' ಕಾರ್ಯ ಸ್ಥಗಿತ
ಶಾರದಾ ಪ್ರಸಾದ್ ವಿಧಿವಶ
ಜೈಪುರ ಸ್ಫೋಟದ ಇಮೇಲ್ ಕಳುಹಿದ್ದು ಬಶೀರ್
ಬಿಎಂಡಬ್ಲ್ಯೂ: ಸಂಜೀವ್ ನಂದಾ ದೋಷಿ
ರಾಜಸ್ಥಾನದಲ್ಲಿ 4 ಸಿಮಿ ಕಾರ್ಯಕರ್ತರ ಬಂಧನ