ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿಂಗೂರು: ಟಾಟಾ ನೌಕರ ಆತ್ಮಹತ್ಯೆ, ರ‌್ಯಾಲಿಯಲ್ಲಿ ಹಿಂಸೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗೂರು: ಟಾಟಾ ನೌಕರ ಆತ್ಮಹತ್ಯೆ, ರ‌್ಯಾಲಿಯಲ್ಲಿ ಹಿಂಸೆ
ಸಿಂಗೂರಿನ ಪುಟ್ಟ ಕಾರು ತಯಾರಿಕಾ ಘಟಕದಲ್ಲಿ ಕೆಲಸ ಕಾರ್ಯ ಸ್ಥಗಿತಗೊಳಿಸಿ ಟಾಟಾ ಮೋಟಾರ್ಸ್ ನಿರ್ಧಾರ ಪ್ರಕಟಿಸಿದ ಮರುದಿನವೇ, ಟಾಟಾ ಯೋಜನೆ ಪರವಾಗಿ ಏರ್ಪಡಿಸಲಾಗಿದ್ದ ರ‌್ಯಾಲಿಯೊಂದು ಹಿಂಸೆಗೆ ತಿರುಗಿದ್ದು, ಇನ್ನೊಂದೆಡೆ, ಟಾಟಾ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಟಾಟಾ ಯೋಜನೆಗೆ ಕಚ್ಚಾ ವಸ್ತು ಪೂರೈಕೆ ಮಾಡುತ್ತಿರುವ ಸ್ಥಳೀಯ ಸುಮಾರು 250 ಮಂದಿ ಸರಬರಾಜುದಾರರು ಈ ರ‌್ಯಾಲಿ ಏರ್ಪಡಿಸಿದ್ದರು. ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ಸಿಂಗೂರಿನಿಂದ ತೊಲಗಬೇಕು, ಯೋಜನಾ ತಾಣದಲ್ಲಿ ಕೆಲಸ ಪುನರಾರಂಭವಾಗಬೇಕು ಎಂದು ಆಗ್ರಹಿಸಿದ ಅವರು ರತನ್‌ಪುರದಿಂದ ರ‌್ಯಾಲಿ ನಡೆಸುತ್ತಿದ್ದರು.

ಪೊಲೀಸರು ಮುಂದುವರಿಯುವುದಕ್ಕೆ ಅವರಿಗೆ ತಡೆಯೊಡ್ಡಿದಾಗ, ಅದರಲ್ಲಿದ್ದ ಪ್ರತಿಭಟನಾಕಾರರು ತೃಣಮೂಲ ಕಾಂಗ್ರೆಸ್ ಬೆಂಬಲಿಗರತ್ತ ಕಲ್ಲು ತೂರಿದರು. ಆ ಪ್ರದೇಶದಲ್ಲಿ ಉದ್ವಿಗ್ನತೆ ತಲೆದೋರಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ನೌಕರ ಆತ್ಮಹತ್ಯೆ: ಟಾಟಾ ಯೋಜನೆಯ ಕಾರ್ಯ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಅದರಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ನೌಕರನೊಬ್ಬ, ಬಡತನದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ. ಟಾಟಾ ಸ್ಥಾವರದಿಂದ ಕೇವಲ 100 ಯಾರ್ಡ್ ದೂರದಲ್ಲಿ 65ರ ಹರೆಯದ ಸುಶೇಣ್ ಸಾಂತ್ರಾ ಎಂಬಾತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಮಕ್ಕಳಾದ ಬಿವಾಶ್ ಮತ್ತು ಉತ್ತಮ್ ಇಬ್ಬರೂ ಟಾಟಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಮಧ್ಯೆ, ರಾಜ್ಯಪಾಲರೊಂದಿಗೆ ಈ ಬಿಕ್ಕಟ್ಟಿನ ಬಗ್ಗೆ ಮಾತುಕತೆ ನಡೆಸುವ ಮುನ್ನ ಸಿಪಿಎಂ ಕಾರ್ಯಕರ್ತರು ಪ್ರಚೋದನಾತ್ಮಕವಾಗಿ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಆಕ್ರಮಣ ಮಾಡುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಧರಣಿ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸುತ್ತಿದ್ದ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಆಕ್ರಮಣ ಮಾಡಲಾಗಿದೆ. ಬಲವಂತವಾಗಿ ನಮ್ಮ ಧರಣಿ ಸತ್ಯಾಗ್ರಹ ನಿಲ್ಲಿಸುವುದು ಸಾಧ್ಯವಿಲ್ಲ ಎಂದು ಮಮತಾ ಹೇಳಿದ್ದಾರೆ.
ಮತ್ತಷ್ಟು
ಸೆ.5ರಂದು ಸಸ್ಪೆನ್ಸ್ ಥ್ರಿಲ್ಲರ್ 'ಪಡ್ರೆ ನ್ಯೂಸ್ಟ್ರೋ' ತೆರೆಗೆ
ಅಸ್ಸಾಂ: ಪ್ರವಾಹ ಉಲ್ಬಣ, 10 ಲಕ್ಷ ಮಂದಿ ನಿರಾಶ್ರಿತರು
ಸಿಂಗೂರಿನಿಂದ ಟಾಟಾ ಹಿಂತೆಗೆತ: ಎಡರಂಗ ಆಘಾತ
ಸಿಂಗೂರ್‌ನಲ್ಲಿ 'ನ್ಯಾನೋ' ಕಾರ್ಯ ಸ್ಥಗಿತ
ಶಾರದಾ ಪ್ರಸಾದ್ ವಿಧಿವಶ
ಜೈಪುರ ಸ್ಫೋಟದ ಇಮೇಲ್ ಕಳುಹಿದ್ದು ಬಶೀರ್