ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿಂಗೂರಿನಲ್ಲಿ ಗಾಂಧಿಗಿರಿ: ಇಂದು ಸಭೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗೂರಿನಲ್ಲಿ ಗಾಂಧಿಗಿರಿ: ಇಂದು ಸಭೆ
PTI
ಎಡೆಬಿಡದ ಮುಷ್ಕರದಿಂದ ರೋಸಿ ಟಾಟಾ ನ್ಯಾನೋ ಸಣ್ಣಕಾರು ಉತ್ಪಾದನಾ ಘಟವಕವನ್ನು ಸ್ಥಳಾಂತರಿಸಲು, ಟಾಟಾ ಮೋಟಾರ್ಸ್ ಸಮೂಹದ ಮುಖ್ಯಸ್ಥ ರತನ್ ಟಾಟಾ ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ಸರಕಾರ ಮತ್ತು ತೃಣಮೂಲ ಕಾಂಗ್ರೆಸ್ ಜತೆಗೆ ಮಾತುಕತೆಗೆ ಮುಂದಾಗಿದ್ದಾರೆ.

ಗುರುವಾರ ರಾಜ್ಯಸರಕಾರಿ ಪ್ರತಿನಿಧಿಗಳು ಮತ್ತು ತೃಣಮೂಲ ಕಾಂಗ್ರೆಸ್ ಜತೆ ಪ್ರತ್ಯಪ್ರತ್ಯೇಕವಾಗಿ ಮಾತುಕತೆ ನಡೆಸಲಿರುವ ರಾಜ್ಯಪಾಲರು, ಶುಕ್ರವಾರ ಉಭಯಬಣಗಳ ಜಂಟಿ ಸಭೆ ನಡೆಸಲಿದ್ದು, ಬಳಿಕ ನ್ಯಾನೋವನ್ನು 'ಹಳಿಗೆ' ತರಲು ಯತ್ನಿಸಲಿದ್ದಾರೆ.

ಟಾಟಾವನ್ನು ಪಶ್ಚಿಮಬಂಗಾಳದಲ್ಲಿ ಉಳಿಸಿಕೊಳ್ಳುವ ವಿಚಾರದಲ್ಲಿ ರಾಜ್ಯ ಉದ್ಯಮ ಸಚಿವ ನಿರುಪಮ ಸೇನ್ ಅವರು ಆಶಾವಾದ ಹೊಂದಿದ್ದು, ನಾವು ಜತೆ ಸೇರಿ ಪರಿಹಾರ ಒಂದನ್ನು ಕಂಡುಕೊಂಡಲ್ಲಿ ಟಾಟಾವನ್ನು ಮತ್ತೆ ರಾಜ್ಯಕ್ಕೆ ಆಹ್ವಾನಿಸಿ, ಉತ್ಪಾದನಾ ಕಾರ್ಯಾಚರಣೆ ಮುಂದುವರಿಸಲು ವಿನಂತಿಸಬಹುದು ಎಂದು ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರೂ ಈ ಉಪಕ್ರಮವನ್ನು ಸ್ವಾಗತಿಸಿದ್ದು, 400 ಎಕರೆ ಭೂಮಿಯನ್ನು ರೈತರಿಗೆ ಮರಳಿಸಬೇಕು ಎಂಬಂತಹ ಪೂರ್ವಷರತ್ತುಗಳನ್ನು ವಿಧಿಸದೆಯೇ ಮಾತುಕತೆಗೆ ಒಪ್ಪಿದ್ದಾರೆ.

ಉದ್ಯಮ ಮತ್ತು ರೈತರಿಗೆ ತೃಪ್ತಿಯಾಗುವಂತಹ ಮಾರ್ಗಒಂದನ್ನು ರಾಜ್ಯಪಾಲರು ಕಂಡುಕೊಳ್ಳಲಿದ್ದಾರೆ ಎಂದು ಹೇಳಿರುವ ಮಮತಾ, ಉದ್ಯಮ ಮುಗುಳ್ನಗಲಿ, ರೈತರು ಸಂತಸ ಪಡಲಿ, ಎಲ್ಲರೂ ಸಂತೋಷವಾಗಿರಲಿ ಎಂದು ಅವರು ಹೇಳಿದ್ದಾರೆ.

ರಾಜ್ಯಪಾಲರು ತನ್ನ ಉಪಕ್ರಮಗಳನ್ನು ವಿವರಿಸಿ ರತನ್ ಟಾಟಾ ಅವರಿಗೆ ಪತ್ರ ಬರೆದಿದ್ದಾರೆ. ಶುಕ್ರವಾರದ ಸಭೆಯಲ್ಲಿ ಟಾಟಾದ ಪ್ರತಿನಿಧಿಯ ಭಾಗವಹಿಸುವಿಕೆಯನ್ನು ಅವರು ಇಚ್ಛಿಸಿದ್ದಾರೆ. ಆದರೆ ಟಾಟಾವು ಸಭೆಯಲ್ಲಿನ ಆಗುಹೋಗುಗಳನ್ನು ದೂರದಿಂದ ವೀಕ್ಷಿಸಲಿದೆ ಎಂದು ಮ‌ೂಲಗಳು ಹೇಳಿವೆ.
ಮತ್ತಷ್ಟು
ಸಿಂಗೂರು: ಟಾಟಾ ನೌಕರ ಆತ್ಮಹತ್ಯೆ, ರ‌್ಯಾಲಿಯಲ್ಲಿ ಹಿಂಸೆ
ಸೆ.5ರಂದು ಸಸ್ಪೆನ್ಸ್ ಥ್ರಿಲ್ಲರ್ 'ಪಡ್ರೆ ನ್ಯೂಸ್ಟ್ರೋ' ತೆರೆಗೆ
ಅಸ್ಸಾಂ: ಪ್ರವಾಹ ಉಲ್ಬಣ, 10 ಲಕ್ಷ ಮಂದಿ ನಿರಾಶ್ರಿತರು
ಸಿಂಗೂರಿನಿಂದ ಟಾಟಾ ಹಿಂತೆಗೆತ: ಎಡರಂಗ ಆಘಾತ
ಸಿಂಗೂರ್‌ನಲ್ಲಿ 'ನ್ಯಾನೋ' ಕಾರ್ಯ ಸ್ಥಗಿತ
ಶಾರದಾ ಪ್ರಸಾದ್ ವಿಧಿವಶ