ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರವಾಹ: ಉದಾರ ಸಹಾಯಕ್ಕೆ ಪ್ರಧಾನಿ ಮನವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರವಾಹ: ಉದಾರ ಸಹಾಯಕ್ಕೆ ಪ್ರಧಾನಿ ಮನವಿ
PTI
ಬಿಹಾರದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು ಉದಾರವಾಗಿ ಸಹಾಯಧನ ನೀಡಿ ಎಂದು ಪ್ರಧಾನಿ ಮನಮೋಹನ್ ಸಿಂಗ್ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರನಿಧಿಗೆ ದೇಣಿಗೆ ನೀಡಬಹುದು ಎಂದು ಹೇಳಿರುವ ಪ್ರಧಾನಿಯವರು ಇದು ನೂರು ಪ್ರತಿಶತ ತೆರಿಗೆ ವಿನಾಯಿತಿ ಪಡೆಯಲಿದೆ ಎಂದು ಹೇಳಿದ್ದಾರೆ. ಅಥವಾ ನೇರವಾಗಿ ಎಸ್‌ಬಿಐ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ದೇನಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್‌ಗಳ ಶಾಖೆಗೂ ಕಳುಹಿಸಬಹುದು ಎಂದು ಅವರು ತಿಳಿಸಿದ್ದಾರೆ.

ಅಲಹಾಬಾದ್ ಬ್ಯಾಂಕ್, ಸಿಟಿ ಬ್ಯಾಂಕ್, ಕೆನರಾ ಬ್ಯಾಂಕ್, ಯ‌ೂಕೋ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ವಿಜಯಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಸ್ಟಾಂಡರ್ಡ್ ಚಾರ್ಟರ್ಡ್, ಎಚ್ಎಸ್‌ಬಿಸಿ, ಆಕ್ಸಿಸ್ ಹಾಗೂ ಐಸಿಐಸಿಐ ಬ್ಯಾಂಕುಗಳು ಪರಿಹಾರ ನಿಧಿ ಹಣ ಸ್ವೀಕರಿಸುತ್ತವೆ.

ಪರಿಹಾರ ನಿಧಿಗೆ ಹಣ ಕಳುಹಿಸಲು ಪಡೆಯುವ ಡಿಮಾಂಡ್ ಡ್ರಾಫ್ಟ್‌ಗೆ ಯಾವುದೇ ಕಮಿಷನ್ ವಿಧಿಸಲಾಗುವುದಿಲ್ಲ. ಆಂತೆಯೇ ಮನಿ ಆರ್ಡರ್ ಮ‌ೂಲಕ ಕಳುಹಿಸುವ ಹಣಕ್ಕೂ ಯಾವುದೇ ದರ ವಸೂಲಿ ಮಾಡಲಾಗುವುದಿಲ್ಲ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಮತ್ತಷ್ಟು
ಸಿಂಗೂರಿನಲ್ಲಿ ಗಾಂಧಿಗಿರಿ: ಇಂದು ಸಭೆ
ಸಿಂಗೂರು: ಟಾಟಾ ನೌಕರ ಆತ್ಮಹತ್ಯೆ, ರ‌್ಯಾಲಿಯಲ್ಲಿ ಹಿಂಸೆ
ಸೆ.5ರಂದು ಸಸ್ಪೆನ್ಸ್ ಥ್ರಿಲ್ಲರ್ 'ಪಡ್ರೆ ನ್ಯೂಸ್ಟ್ರೋ' ತೆರೆಗೆ
ಅಸ್ಸಾಂ: ಪ್ರವಾಹ ಉಲ್ಬಣ, 10 ಲಕ್ಷ ಮಂದಿ ನಿರಾಶ್ರಿತರು
ಸಿಂಗೂರಿನಿಂದ ಟಾಟಾ ಹಿಂತೆಗೆತ: ಎಡರಂಗ ಆಘಾತ
ಸಿಂಗೂರ್‌ನಲ್ಲಿ 'ನ್ಯಾನೋ' ಕಾರ್ಯ ಸ್ಥಗಿತ