ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪತ್ರವು ರಹಸ್ಯವಲ್ಲ, ಒಪ್ಪಂದವನ್ನು ಬೆಂಬಲಿಸುತ್ತದೆ: ಕಾಕೋಡ್ಕರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪತ್ರವು ರಹಸ್ಯವಲ್ಲ, ಒಪ್ಪಂದವನ್ನು ಬೆಂಬಲಿಸುತ್ತದೆ: ಕಾಕೋಡ್ಕರ್
PTI
ಬುಶ್ ಆಡಳಿತ ಮತ್ತು ಅಮೆರಿಕ ಕಾಂಗ್ರೆಸ್ ನಡುವಿನ ಪತ್ರವ್ಯವಹಾರವನ್ನು ವಿವಾದಾಸ್ಪದ ಎಂದು ಬಿಂಬಿಸುವ ಎಲ್ಲಾ ಸಿದ್ಧಾಂತಗಳನ್ನು ತಳ್ಳಿಹಾಕಿರುವ ಅಣುಶಕ್ತಿ ಆಯೋಗದ ಮುಖ್ಯಸ್ಥ ಅನಿಲ್ ಕಾಕೋಡ್ಕರ್ ಅವರು, ಈ 'ರಹಸ್ಯ ಪತ್ರ'ದ ಕುರಿತು ನವದೆಹಲಿಗೆ ತಿಳಿದಿತ್ತು ಆದರೆ, ಅಮೆರಿಕವು ಇದನ್ನು ಬಹಿರಂಗ ಪಡಿಸುತ್ತದೆ ಎಂಬುದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಅಮೆರಿಕದ ಈ ದಾಖಲೆಪತ್ರದ ಕುರಿತು ಯುಪಿಎ ಸರಕಾರಕ್ಕೆ ತಿಳಿದಿತ್ತು ಎಂದು ಹೇಳಿದರಾದರೂ, ಇದನ್ನು ಅತ್ಯಂತ ಗೌಪ್ಯವೆಂದು ಪರಿಗಣಿಸಲಾಗಿತ್ತು ಎಂದು ಹೇಳಿದ್ದಾರೆ.

ಅಣು ಪರೀಕ್ಷೆಯ ಹಕ್ಕಿನ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅವರು, ಒಂದೊಮ್ಮೆ ಅಣು ಪರೀಕ್ಷೆ ನಡೆಸಿದಲ್ಲಿ ಭಾರತದ ಅಣು ಸ್ಥಾವರಗಳ ಸುಲಲಿತ ಕಾರ್ಯಾಚರಣೆಗೆ ಭಾರತವೇ ಹೊಣೆ ಎಂದು ಹೇಳಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಅವರೂ, "ನಮಗೆ ಕ್ರಿಯೆಯ ಹಕ್ಕಿದೆ. ಅಂತೆಯೆ ಅಮೆರಿಕಕ್ಕೆ ಪ್ರತಿಕ್ರಿಯೆ ಹಕ್ಕಿದೆ" ಎಂದು ಹೇಳಿದ್ದಾರೆ.

ಈ ಒಪ್ಪಂದವು ರಾಷ್ಟ್ರದ ಮತ್ತು ವಿಶ್ವದ ಒಳಿತಿಗೆ ಅನುಕೂಲವಾಗುತ್ತದೆ ಎಂದಿರುವ ಅವರು, ಭಾರತ ಮತ್ತು ಅದರ ಕ್ಷಿಪ್ರ ಬೆಳವಣಿಗೆಗೆ ಅಗತ್ಯ ಇರುವ ಹೆಚ್ಚಿನ ಇಂಧನವನ್ನು ಇದು ಪೂರೈಸುತ್ತದೆ ಎಂದು ಹೇಳಿದ್ದಾರೆ.
ಮತ್ತಷ್ಟು
ಅಮೆರಿಕ ವಿಶೇಷ ಪತ್ರವನ್ನು ನಿರ್ಲಕ್ಷಿಸಿದ ಕಾಂಗ್ರೆಸ್
ಅಣುಬಂಧ: ವಿಶೇಷ ಅಧಿವೇಶನಕ್ಕೆ ಬಿಜೆಪಿ ಒತ್ತಾಯ
ಪ್ರವಾಹ: ಉದಾರ ಸಹಾಯಕ್ಕೆ ಪ್ರಧಾನಿ ಮನವಿ
ಸಿಂಗೂರಿನಲ್ಲಿ ಗಾಂಧಿಗಿರಿ: ಇಂದು ಸಭೆ
ಸಿಂಗೂರು: ಟಾಟಾ ನೌಕರ ಆತ್ಮಹತ್ಯೆ, ರ‌್ಯಾಲಿಯಲ್ಲಿ ಹಿಂಸೆ
ಸೆ.5ರಂದು ಸಸ್ಪೆನ್ಸ್ ಥ್ರಿಲ್ಲರ್ 'ಪಡ್ರೆ ನ್ಯೂಸ್ಟ್ರೋ' ತೆರೆಗೆ