ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವಿಮಾನ ತುರ್ತು ಭೂಸ್ಪರ್ಶ-ಸೋನಿಯಾ ಪಾರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನ ತುರ್ತು ಭೂಸ್ಪರ್ಶ-ಸೋನಿಯಾ ಪಾರು
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ದೋಷದಿಂದಾಗಿ ಗುರುವಾರ ಬೆಂಗಳೂರು ವಿಮಾನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶವಾಗಿದ್ದು, ಅವರು ಅಪಾಯದಿಂದ ಪಾರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಿಂದ ಕೊಯಮತ್ತೂರಿಗೆ ಚಾರ್ಟೆಡ್ ವಿಮಾನದಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಕೂಡ ಜೊತೆಗಿದ್ದರು.


ಈ ಹಿನ್ನೆಲೆಯಲ್ಲಿ ಬಿಐಎಎಲ್‌‌ನಲ್ಲಿ ಸ್ವಲ್ಪ ಮಟ್ಟಿನ ಗೊಂದಲ ಉಂಟಾಯಿತು. ವಿಮಾನದ ಎಂಜಿನ್‌‌ನಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ತುರ್ತು ಭೂ ಸ್ಪರ್ಶ ಮಾಡಿತು. ಈ ಘಟನೆಯಿಂದಾಗಿ ಸೋನಿಯಾ ಗಾಂಧಿಯವರು ಒಂದು ಗಂಟೆಗೂ ಹೆಚ್ಚಿನ ಕಾಲ ವಿಮಾನ ನಿಲ್ದಾಣದಲ್ಲಿಯೇ ಉಳಿಯಬೇಕಾಯಿತು. ಬಳಿಕ ಇನ್ನೊಂದು ವಿಮಾನದಲ್ಲಿ ಕೊಯಮತ್ತೂರಿಗೆ ಪ್ರಯಾಣ ಬೆಳೆಸಿದರು.
ಮತ್ತಷ್ಟು
ಅಣು ಪರೀಕ್ಷೆ ನಡೆಸಬಹುದು: ಸರಕಾರದ ಭರವಸೆ
ವಂಚಕ ಸರಕಾರ ಎಂದ ಕಾರಟ್, ಸಂದಿಗ್ಧತೆಯಲ್ಲಿ ಮುಲಾಯಂ
ಪತ್ರವು ರಹಸ್ಯವಲ್ಲ, ಒಪ್ಪಂದವನ್ನು ಬೆಂಬಲಿಸುತ್ತದೆ: ಕಾಕೋಡ್ಕರ್
ಅಮೆರಿಕ ವಿಶೇಷ ಪತ್ರವನ್ನು ನಿರ್ಲಕ್ಷಿಸಿದ ಕಾಂಗ್ರೆಸ್
ಅಣುಬಂಧ: ವಿಶೇಷ ಅಧಿವೇಶನಕ್ಕೆ ಬಿಜೆಪಿ ಒತ್ತಾಯ
ಪ್ರವಾಹ: ಉದಾರ ಸಹಾಯಕ್ಕೆ ಪ್ರಧಾನಿ ಮನವಿ