ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದಾಖಲೆಯ ಅಂಶಗಳನ್ನು ಬಚ್ಚಿಟ್ಟಿಲ್ಲ: ಅಮೆರಿಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾಖಲೆಯ ಅಂಶಗಳನ್ನು ಬಚ್ಚಿಟ್ಟಿಲ್ಲ: ಅಮೆರಿಕ
PTI
ಭಾರತ ಅಮೆರಿಕ ಅಣುಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕವು ಒಪ್ಪಂದದ ದಾಖಲೆಯಲ್ಲಿ ನಮೂದಾಗಿರುವ ಅಂಶಗಳನ್ನು ಮುಚ್ಚಿಟ್ಟಿದೆ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಅಮೆರಿಕ, ಅಣುಪರೀಕ್ಷೆಯ ಸ್ತಂಭನಕ್ಕೆ ಭಾರತದ ಬದ್ಧತೆಯು ಒಪ್ಪಂದದಲ್ಲಿ ಸುಸ್ಪಷ್ಟವಾಗಿದೆ ಎಂದು ಹೇಳಿದೆ.

123 ಒಪ್ಪಂದದಲ್ಲಿ ಭಾರತದ ಜವಾಬ್ದಾರಿಗಳು ಅತ್ಯಂತ ಸ್ಪಷ್ಟವಾಗಿದೆ ಮತ್ತು ಭಾರತೀಯರು ಅಣುಪರೀಕ್ಷೆಯ ಸ್ತಂಭನಕ್ಕೆ ಒಪ್ಪಿದ್ದಾರೆ ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ವಕ್ತಾರ ರಾಬರ್ಟ್ ವುಡ್ ಹೇಳಿದ್ದಾರೆ.

ಭಾರತವು ಅಣ್ವಸ್ತ್ರಗಳ ಪರೀಕ್ಷೆ ನಡೆಸಿದಲ್ಲಿ ಅಮೆರಿಕ ಅಣುಪೂರೈಕೆ ಮಾಡದು ಎಂಬುದಾಗಿ ಅಮೆರಿಕ ಆಡಳಿತೆಯು ಅಮೆರಿಕ ಕಾಂಗ್ರೆಸ್‌ಗೆ ಬರೆದಿರುವ ಪತ್ರ ಬುಧವಾರ ಬಹಿರಂಗಗೊಂಡಿದೆ.

ಒಂಭತ್ತು ತಿಂಗಳಿನಿಂದ ರಹಸ್ಯವಾಗಿದ್ದ ಈ ವಿಶೇಷ ಪತ್ರವನ್ನು ಬುಧವಾರ ಅಮೆರಿಕ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಹೋವರ್ಡ್ ಎಲ್ ಬರ್ಮನ್ ಬಹಿರಂಗ ಪಡಿಸಿದ್ದು, ಪತ್ರವು ಅಮೆರಿಕದ ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು.

ಏತನ್ಮಧ್ಯೆ, ಈ ಹೊಸ ವಿವಾದವನ್ನು ನಿರಾಕರಿಸಿರುವ ಕಾಂಗ್ರೆಸ್, ಭಾರತವು ತನ್ನ ಪರಮಾಣು ಪರೀಕ್ಷೆಯ ಹಕ್ಕನ್ನು ಕಳೆದುಕೊಂಡಿಲ್ಲ, 123 ಒಪ್ಪಂದದ ಪ್ರಕಾರ ರಾಷ್ಟ್ರವು ಪರಮಾಣು ಪರೀಕ್ಷೆಯ ಹಕ್ಕನ್ನು ಹೊಂದಿಗೆ ಎಂದು ಸಮರ್ಥಿಸಿಕೊಂಡಿದೆ.
ಮತ್ತಷ್ಟು
ಆರ್‌ಎಸ್‌ಎಸ್-ಭಜರಂಗದಳ ನಿಷೇಧಿಸಿ: ಪಾಸ್ವಾನ್
ವಿಮಾನ ತುರ್ತು ಭೂಸ್ಪರ್ಶ-ಸೋನಿಯಾ ಪಾರು
ಅಣು ಪರೀಕ್ಷೆ ನಡೆಸಬಹುದು: ಸರಕಾರದ ಭರವಸೆ
ವಂಚಕ ಸರಕಾರ ಎಂದ ಕಾರಟ್, ಸಂದಿಗ್ಧತೆಯಲ್ಲಿ ಮುಲಾಯಂ
ಪತ್ರವು ರಹಸ್ಯವಲ್ಲ, ಒಪ್ಪಂದವನ್ನು ಬೆಂಬಲಿಸುತ್ತದೆ: ಕಾಕೋಡ್ಕರ್
ಅಮೆರಿಕ ವಿಶೇಷ ಪತ್ರವನ್ನು ನಿರ್ಲಕ್ಷಿಸಿದ ಕಾಂಗ್ರೆಸ್