ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿಂಗೂರು: ಸಫಲತೆಯ ಹಾದಿಯಲ್ಲಿ 'ಗಾಂಧಿಗಿರಿ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗೂರು: ಸಫಲತೆಯ ಹಾದಿಯಲ್ಲಿ 'ಗಾಂಧಿಗಿರಿ'
ಸಿಂಗೂರು ವಿವಾದವನ್ನು ಬಗೆಹರಿಸಲು ಮು0ದಾಗಿರುವ ಪಶ್ಚಿಮಬಂಗಾಳ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿಯವರ ಪ್ರಯತ್ನ ಸಫಲತೆಯ ಹಾದಿಯಲ್ಲಿ ಸಾಗಿರುವಂತಿದೆ.

ತೃಣಮೂಲ ಕಾಂಗ್ರೆಸ್ ನೇತೃತ್ವದ ಕೃಷಿ ಜಮೀನ್ ರಕ್ಷಾ ಸಮಿತಿ ಮತ್ತು ಬಂಗಾಳ ಸರಕಾರದ ಮೊದಲ ಸುತ್ತಿನ ಮಾತುಕತೆಯಲ್ಲಿ ಚಿಕ್ಕ ಆದರೆ ಪ್ರಮುಖ ಸುಧಾರಣೆ ಕಂಡುಬಂದಿದೆ.

ಟಾಟಾಮೋಟಾರ್ಸ್ ಆವರಣದಲ್ಲಿದ್ದ 44 ಎಕರೆ ಜಾಗವನ್ನು ಬಿಟ್ಟುಕೊಡಲು ಬಂಗಾಳ ಕೈಗಾರಿಕಾಭಿವೃದ್ಧಿ ನಿಗಮವು ಒಪ್ಪಿದೆ. ಅಲ್ಲದೆ, ತಮ್ಮ ಭೂಮಿ ಕಳೆದುಕೊಂಡಿರುವ ರೈತರಿಗೆ ವಿಸ್ತೃತ ಪ್ಯಾಕೇಜನ್ನು ನೀಡಲೂ ಸರಕಾರ ಒಪ್ಪಿದೆ.

ಏತನ್ಮಧ್ಯೆ, ತೃಣ ಮೂಲ ಕಾಂಗ್ರೆಸ್ ಸಹ ತನ್ನ ಬಿಗಿ ಪಟ್ಟನ್ನು ಒಂದಿಷ್ಟು ಸಡಿಲಿಸಿದಂತೆ ತೋರುತ್ತಿದೆ. 400 ಎಕರೆ ಜಾಗವನ್ನು ಕೃಷಿಕರಿಗೆ ಮರಳಿಸಬೇಕೆಂದು ಹಠಹಿಡಿದಿದ್ದ ಪಕ್ಷವು ಇದೀಗ ತನ್ನ ಬೇಡಿಕೆಯನ್ನು 250 ಎಕರೆಗಳಿಗೆ ಇಳಿಸಿದೆ.

ಆದರೆ ಮಾತುಕತೆಯು ಸಮಸ್ಯೆಯಿಂದ ಸಂಪೂರ್ಣ ಮುಕ್ತವಾಗಿಲ್ಲ. ಶುಕ್ರವಾರದ ಮೂತುಕತೆ ಆರು ಗಂಟೆಗಳ ಕಾಲ ತಡವಾಗಿ ಆರಂಭಗೊಂಡಿತು. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 2ರಲ್ಲಿ ಒಡ್ಡಲಾಗಿರುವ ತಡೆಯನ್ನು ತೊಡೆದು ಹಾಕಲು ಮಮತಾ ಒಪ್ಪದ ವಿನಹ ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸರಕಾರ ಹಠಹೂಡಿತು. ಕೊನೆಯಲ್ಲಿ ತುಸು ಭಾಗಿದ ಮಮತಾ ಹೆದ್ದಾರಿಯ ಒಂದು ಭಾಗವನ್ನು ತೆರವುಗೊಳಿಸಲು ಒಪ್ಪಿದರು.

ಕಳೆದ ಕೆಲವುದಿನಗಳಿಂದ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಕಾತರವಾಗಿದ್ದರೂ, ಉಭಯ ಬಣಗಳೂ ತಮ್ಮ ಮುಖ ಉಳಿಸಿಕೊಳ್ಳಲು ಯತ್ನಿಸುತ್ತಿವೆ.

ಮಾತುಕತೆಯನ್ನು ಇನ್ನೂ ಸಜೀವವಾಗಿಡಲು ರಾಜ್ಯಪಾಲರು ಸಫಲರಾಗಿದ್ದು, ಇದು ಅವರು ಸಾಧಿಸಿದ ಗೆಲುವೇ ಆಗಿದೆ. ಮುಂದಿನ 48 ಗಂಟೆಗಳೊಳಗಾಗಿ ತೃಣಮೂಲ ಕಾಂಗ್ರೆಸ್ ಮತ್ತು ಪಶ್ಚಿಮ ಬಂಗಾಳ ಸರಕಾರ ಸಮಸ್ಯೆಯನ್ನು ಪರಿಹರಿಸಲಿವೆ ಎಂದು ನಿರೀಕ್ಷಿಸಲಾಗಿದೆ.

ಕೃಷಿ ಭೂಮಿಯನ್ನು ಮರಳಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ನೇತೃತ್ವದಲ್ಲಿ ನಡೆಸಲಾಗಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ತೊಂದರೆಗೀಡಾದ ಟಾಟಾಮೋಟಾರ್ಸ್, ತನ್ನ ಸಣ್ಣ ಕಾರು ಯೋಜನೆಯನ್ನು ಸಿಂಗೂರಿನಿಂದಲೇ ಎತ್ತಂಗಡಿ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿಯವರು ರಾಜೀ ಸೂತ್ರಕ್ಕೆ ಮುಂದಾಗಿದ್ದು, ಟಾಟಾ ಯೋಜನೆಯನ್ನು ರಾಜ್ಯದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.
ಮತ್ತಷ್ಟು
ಪವರ್ ಕಟ್: ವಧುವಿನ ಗೆಳತಿಗೆ ತಾಳಿ ಕಟ್ಟಿದ ವರ!
ಅಂತರ್ಜಾತಿ ವಿವಾಹ ವಿವಾದದಲ್ಲಿ ಚಿರಂಜೀವಿ
ಅಸ್ಸಾಮಿನಲ್ಲಿ ಮುಂದುವರಿದ ಪ್ರವಾಹಸ್ಥಿತಿ
ಬಿಎಂಡಬ್ಲ್ಯು: ನಂದಾಗೆ 5 ವರ್ಷ ಜೈಲು
ಎನ್ಎಸ್‌ಜಿ ಭಯ ದೂರಗೊಳಿಸಲು ಭಾರತ ಯತ್ನ
ಶಿಕ್ಷಣದ ಮಹತ್ವವನ್ನು ರಾಜಕಾರಣಿಗಳು ಅರಿಯಲಿ: ಸಿಂಗ್