ಭಾರತಕ್ಕೆ ಸ್ಪಷ್ಟ ವಿನಾಯಿತಿ ನೀಡುವ ಕುರಿತು ಒಪ್ಪಂದಕ್ಕೆ ಬರಲು ಎನ್‌ಎಸ್‌ಜಿಯ ಎರಡು ದಿನಗಳ ಸಭೆಯು ವಿಫಲಾವಾಗಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮನಮೋಹನ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಮತ್ತು ರಾಷ್ಟ್ರೀಯ ಭದ್ರತಾ ಸಲಹಾಗಾರ ಶಿವಶಂಕರ್ ಮೆನನ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ಅಣು ಪೂರೈಕೆ ಸಮೂಹ (ಎನ್ಎನ್‌ಜಿ)ದ 17 ಗಂಟೆಗಳ ಮಾತುಕತೆಯಲ್ಲಿ ಪರಮಾಣು ವ್ಯಾಪಾರದಲ್ಲಿ ಭಾರತಕ್ಕೆ ವಿನಾಯಿತಿ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದ್ದು, ಸಭೆಯು ಶನಿವಾರ ಮುಂದುವರಿಯುತ್ತಿದೆ.
ಭಾರತಕ್ಕೆ ಅಣು ಸರಬರಾಜು ವಿಚಾರದಲ್ಲಿ ವಿನಾಯಿತಿ ನೀಡಲು ವಿರೋಧ ತೋರುತ್ತಿರುವ ರಾಷ್ಟ್ರಗಳೊಂದಿಗೆ ಅಮೆರಿಕ ಪ್ರತ್ಯೇಕವಾಗಿ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಮಾತುಕತೆಗಳನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಪ್ರಣಬ್ ಮುಖರ್ಜಿ ಶುಕ್ರವಾರ ಹೊಸ ಹೇಳಿಕೆ ನೀಡಿ, ಅಣ್ವಸ್ತ್ರ ಪ್ರಸರಣ ತಡೆಯ ಕುರಿತು ಭಾರತದ ಬದ್ಧತೆಯನ್ನು ಒತ್ತಿ ಹೇಳಿದ್ದರು.
ಪ್ರಧಾನಿಯವರು ವಿಯೆನ್ನಾದಲ್ಲಿನ ಪ್ರತಿ ಚಲನೆಗಳನ್ನೂ ಪರಿವೀಕ್ಷಿಸುತ್ತಿದ್ದಾರಾದರೂ, ಮಾತುಕತೆ ಪ್ರಕ್ರಿಯೆಯಲ್ಲಿ ಅವರು ನೇರವಾಗಿ ಒಳಗೊಂಡಿಲ್ಲ. ಅಮೆರಿಕವು ಭಿನ್ನಾಭಿಪ್ರಾಯ ಹೊಂದಿರುವ ರಾಷ್ಟ್ರಗಳ ಮನವೊಲಿಸುವಂತೆ ಪ್ರಧಾನಮಂತ್ರಿ ಕಚೇರಿ ನಿರೀಕ್ಷಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
|