ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಇದು ಜನ್ಮಜನ್ಮದ 'ಅಣುಬಂಧ': ಪ್ರಣಬ್ ಮುಖರ್ಜಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇದು ಜನ್ಮಜನ್ಮದ 'ಅಣುಬಂಧ': ಪ್ರಣಬ್ ಮುಖರ್ಜಿ
ಅಣು ಸರಬರಾಜು ಸಮೂಹವು ಅಣು ವ್ಯಾಪಾರಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ನೀಡಿರುವ ವಿನಾಯಿತಿಯು ರಾಷ್ಟ್ರದ ಇಂಧನ ಅವಶ್ಯಕತೆಯ ಪೂರೈಕೆಯಲ್ಲಿ ಪ್ರಮುಖ ಮೈಲಿಗಲ್ಲು ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಅಣ್ವಸ್ತ್ರ ಪ್ರಸರಣ ತಡೆಯ ಭಾರತದ ಬದ್ಧತೆಯನ್ನು ಶುಕ್ರವಾರ ಸ್ಪಷ್ಟ ಪಡಿಸಿರುವ ಪ್ರಣಬ್ ಮುಖರ್ಜಿ, ಈ ಬೆಳವಣಿಗೆಯು ಜನುಮಜನುಮದ 'ಅಣುಬಂಧ'ವೋ ಎಂಬಂತೆ ಆನಂದ ತುಂದಿಲರಾಗಿದ್ದಾರೆ.

ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಭಾರತವು ಅಣು ವ್ಯಾಪಾರವನ್ನು ಮುಂದುವರಿಸಲು ಸಮರ್ಥವಾಗುವಂತಹ ಹೇಳಿಕೆಯೊಂದನ್ನು ಎನ್ಎಸ್‌ಜಿ(ಅಣು ಪೂರೈಕೆ ಸಮೂಹ) ಅಂಗೀಕರಿಸಿದೆ. "ಈ ನಡೆಯನ್ನು ನಾವು ಸ್ವಾಗತಿಸುತ್ತೇವೆ. ಇದು ನಮ್ಮ ಇಂಧನ ಅವಶ್ಯಕತೆಯ ಪೂರೈಕೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ" ಎಂದು ಪ್ರಣಬ್ ಮುಖರ್ಜಿ, ವಿನಾಯಿತಿ ಸುದ್ದಿ ಹೊರಬೀಳುತ್ತಿರುವಂತೆಯೇ ಶನಿವಾರ ಸಂಜೆ ಕರೆದ ಪತ್ರಿಕಾ ಗೋಷ್ಠಿಯಲ್ಲಿ ನುಡಿದರು.

"ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಹಾಗೂ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರ ಉಪಕ್ರಮಗಳಿಂದ ಇದು ಸಾಧ್ಯವಾಯಿತು. ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ನಿರ್ದೇಶಕ ಮೊಹ್ಮದ್ ಅಲ್‌ಬರಾದಿ ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಭಾರತದ ಇಂಧನ ಮತ್ತು ಅಣು ವ್ಯಾಪಾರದಲ್ಲಿ ಇದು ಹೊಸ ಅಧ್ಯಾಯ ಒಂದನ್ನು ತೆರೆಯಲಿದೆ. ಇದೊಂದು ಮಹತ್ವದ ಬೆಳವಣಿಗೆ" ಎಂದು ಪ್ರಣಬ್ ಹೇಳಿದ್ದಾರೆ.

ಅಮೆರಿಕ, ಬ್ರಿಟನ್, ಫ್ರಾನ್ಸ್, ರಶ್ಯಾ, ಜರ್ಮನಿ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ಗಳ ಬೆಂಬಲವನ್ನು ಸರಕಾರ ಶ್ಲಾಘಿಸುತ್ತದೆ. ಅಧ್ಯಕ್ಷ ಬುಶ್ ಹಾಗೂ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಜಾ ರೈಸ್ ಅವರ ಪ್ರಯತ್ನಕ್ಕೆ ಸರಕಾರ ವಂದನೆ ಸಲ್ಲಿಸುತ್ತದೆ. ಅಣುಶಕ್ತಿ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ತನ್ನ ಸಹೋದ್ಯೋಗಿಗಳಿಗೂ ತಾನು ವಂದಿಸುವುದಾಗಿ ಅವರು ನುಡಿದರು.

ಭಾರತಕ್ಕೆ ವಿನಾಯಿತಿ ನೀಡುವ ವಿಚಾರದಲ್ಲಿ ಆಸ್ಟ್ರಿಯಾ ಭಿನ್ನಾಭಿಪ್ರಾಯ ಹೊಂದಿತ್ತು. ಹಾಗಾಗಿ ಎರಡು ದಿನಗಳ ಮಾತುಕತೆಯಲ್ಲಿ ಒಮ್ಮತಕ್ಕೆ ಬರಲು ವಿಫಲವಾಗಿದ್ದು, ಶನಿವಾರವೂ ಮಾತುಕತೆ ಮುಂದುವರಿದಿತ್ತು. ಶುಕ್ರವಾರ ಪ್ರಣಬ್ ಅವರು ಹೇಳಿಕೆ ನೀಡಿದ ಬಳಿಕ ತಮಗೆ ಮನವರಿಕೆಯಾಯಿತು ಎಂದು ಆಸ್ಟ್ರಿಯಾದ ವಿದೇಶಾಂಗ ಇಲಾಖೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಮತ್ತಷ್ಟು
ಉತ್ತರ, ಪಶ್ಚಿಮ ಭಾರತದಲ್ಲಿ ಲಘ ಕಂಪನ
ಎನ್‌ಎಸ್‌ಜಿ ಬಿಕ್ಕಟ್ಟು: ಪ್ರಧಾನಿ - ಪ್ರಣಬ್ ಭೇಟಿ
ಸಿಂಗೂರು: ಸಫಲತೆಯ ಹಾದಿಯಲ್ಲಿ 'ಗಾಂಧಿಗಿರಿ'
ಪವರ್ ಕಟ್: ವಧುವಿನ ಗೆಳತಿಗೆ ತಾಳಿ ಕಟ್ಟಿದ ವರ!
ಅಂತರ್ಜಾತಿ ವಿವಾಹ ವಿವಾದದಲ್ಲಿ ಚಿರಂಜೀವಿ
ಅಸ್ಸಾಮಿನಲ್ಲಿ ಮುಂದುವರಿದ ಪ್ರವಾಹಸ್ಥಿತಿ