ಅಲ್-ಬದ್ರ್ ಉಗ್ರಗಾಮಿ ಸಂಘಟನೆಯ ಸ್ವಯಂ ಘೋಷಿತ ಮುಖ್ಯಸ್ಥನೊಬ್ಬನನ್ನು ಭದ್ರತಾ ಪಡೆಗಳು ಭಾನುವಾರ ನಸುಕಿನಲ್ಲಿ ಗುಂಡಿಟ್ಟು ಕೊಂದಿವೆ.
ಇಲ್ಲಿಂದ ಸುಮಾರು 55 ಕಿಮೀ ದೂರದಲ್ಲಿರುವ ವಾರ್ಪೋರ ಸೊಪೋರೆ ಎಂಬಲ್ಲಿ ಉಗ್ರರು ಅಡದಿದ್ದಾರೆ ಎಂಬ ಖಚಿತ ಮಾಹಿತಿಯಾಧಾರದಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರು ನಡೆಸಿರುವ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನನ್ನು ಕೊಂದ ಹಾಕಲಾಗಿದೆ.
ಮೃತನನ್ನು ಅಲ್-ಬದ್ರ್ ಮುಖ್ಯಸ್ಥ ಹೈದರ್ ಎಂದು ಗುರುತಿಸಲಾಗಿದೆ. ಉತ್ತರ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಕಳೆದ 24 ಗಂಟೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇದು ದ್ವಿತೀಯ ಯಶಸ್ಸಾಗಿದೆ.
ಲಷ್ಕರೆ-ಇ-ತೋಯ್ಬಾದ ವಿಭಾಗೀಯ ಕಮಾಂಡರ್ ಒಬ್ಬ ಶನಿವಾರದ ಕಾರ್ಯಾಚರಣೆ ವೇಳೆಗೆ ಹತನಾಗಿದ್ದ.
|