ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಡೇರಾ ಸಚ್ಚಾ ಮುಖ್ಯಸ್ಥ ವಿರುದ್ಧ ಅತ್ಯಾಚಾರ ಆರೋಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡೇರಾ ಸಚ್ಚಾ ಮುಖ್ಯಸ್ಥ ವಿರುದ್ಧ ಅತ್ಯಾಚಾರ ಆರೋಪ
ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಅವರ ಮೇಲೆ ಸ್ಥಳೀಯ ಕೋರ್ಟೊಂದು ಹತ್ಯೆ ಮತ್ತು ಅತ್ಯಾಚಾರದ ದೋಷಾರೋಪ ಹೊರಿಸಿದ್ದು, ಅಕ್ಟೋಬರ್ ನಾಲ್ಕರಂದು ಮುಂದಿನ ವಿಚಾರಣೆ ನಡೆಸಲಿದೆ.

ಕಳೆದ ಎರಡು ವಿಚಾರಣೆ ಸಂದರ್ಭದಲ್ಲಿ ಹಾಜರಿರದಿದ್ದ ಡೇರಾ ಮುಖ್ಯಸ್ಥ ಶನಿವಾರ ಕೋರ್ಟ್‌ನಲ್ಲಿ ಉಪಸ್ಥಿತರಿದ್ದರು. 1999ರಲ್ಲಿ ಡೇರಾದ ಸಾಧ್ವಿಯ ಘಟನೆಗೆ ಸಂಬಂಧಿಸಿದಂತೆ ಡೇರಾ ಮುಖ್ಯಸ್ಥರ ವಿರುದ್ಧ ಅತ್ಯಾಚಾರದ ದೋಷಾರೋಪ ಹೊರಿಸುವಂತೆ ಸಿಬಿಐ ಕೋರ್ಟ್ ಆದೇಶ ನೀಡಿತ್ತು.

ಈ ಪ್ರಕರಣದಲ್ಲಿ ಗುರ್ಮಿತ್ ರಾಮ್ ಮಾತ್ರ ಆರೋಪಿಯಾಗಿದ್ದರು. ಸಿರ್ಸಾ ಪತ್ರಕರ್ತ ರಾಮ್ ಚಂದರ್ ಚತ್ರಪತಿ ಮತ್ತು ಮಾಜಿ ಡೇರಾ ಮ್ಯಾನೇಜರ್ ರಂಜೀತ್ ಸಿಂಗ್ ಹತ್ಯೆಗಳಿಗೆ ಸಂಬಂಧಿಸಿದಂತೆ ಕೂಡ ರಹೀಮ್ ವಿರುದ್ಧ ಆರೋಪ ಹೊರಿಸಲಾಗಿದೆ.

ಗುರ್ಮೀತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 376(ಅತ್ಯಾಚಾರ) 506 (ಕ್ರಿಮಿನಲ್ ಬೆದರಿಕೆ), 509 (ಮಹಿಳಾ ಪ್ರತಿಷ್ಠೆಗೆ ಧಕ್ಕೆಯುಂಟುಮಾಡುವ ಮಾತು ಯಾ ವರ್ತನೆ) ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಿಬಿಐ ಆದೇಶವನ್ನು ತೊಡೆದು ಹಾಕುವಂತೆ ಡೇರಾ ಮುಖ್ಯಸ್ಥ ಪಂಜಾಬ್ ಹರ್ಯಾಣ ಹೈಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ.
ಮತ್ತಷ್ಟು
ಅಲ್-ಬದ್ರ್ ಮುಖಂಡ ಗುಂಡಿಗೆ ಆಹುತಿ
ಇದು ಜನ್ಮಜನ್ಮದ 'ಅಣುಬಂಧ': ಪ್ರಣಬ್ ಮುಖರ್ಜಿ
ಉತ್ತರ, ಪಶ್ಚಿಮ ಭಾರತದಲ್ಲಿ ಲಘ ಕಂಪನ
ಎನ್‌ಎಸ್‌ಜಿ ಬಿಕ್ಕಟ್ಟು: ಪ್ರಧಾನಿ - ಪ್ರಣಬ್ ಭೇಟಿ
ಸಿಂಗೂರು: ಸಫಲತೆಯ ಹಾದಿಯಲ್ಲಿ 'ಗಾಂಧಿಗಿರಿ'
ಪವರ್ ಕಟ್: ವಧುವಿನ ಗೆಳತಿಗೆ ತಾಳಿ ಕಟ್ಟಿದ ವರ!