ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿಂಗೂರ್ ಬಿಕ್ಕಟ್ಟು ಅಂತ್ಯ: ನ್ಯಾನೋ ಹಾದಿ ಸುಗಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗೂರ್ ಬಿಕ್ಕಟ್ಟು ಅಂತ್ಯ: ನ್ಯಾನೋ ಹಾದಿ ಸುಗಮ
ಸುಮಾರು ಎರಡು ವಾರಗಳ ಅವಧಿಯ ಸಿಂಗೂರ್ ಬಿಕ್ಕಟ್ಟು ಕೊನೆಗೂ ಅಂತ್ಯಗೊಂಡಿದ್ದು, ಈ ಮೂಲಕ ನಿಗದಿಯಂತೆಯೇ ಮಾರುಕಟ್ಟೆಗೆ ಬರಲು ನ್ಯಾನೋ ಹಾದಿಯು ಸುಗಮಗೊಂಡಂತಾಗಿದೆ.

ರೈತರ ಬೇಡಿಕೆಗಳತ್ತ ದೃಷ್ಟಿ ಹಾಯಿಸಲು ಸಮಿತಿಯೊಂದನ್ನು ರಚಿಸಲು ಸರಕಾರವು ಭಾನುವಾರ ರಾತ್ರಿ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಟಾಟಾ ಸಣ್ಣ ಕಾರು ಯೋಜನೆಯ ವಿರುದ್ಧದ ರೈತರ ಬಿಕ್ಕಟ್ಟು ಅಂತ್ಯಗೊಂಡಿದ್ದು, ಈ ಕುರಿತಾಗಿ ತೃಣಮೂಲ ಕಾಂಗ್ರೆಸ್ ಕಳೆದ ಕೆಲವು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದೆ.

ಪರಿಹಾರ ಧನ ದೊರೆಯದ ರೈತರಿಗೆ ಜಮೀನನ್ನು ಹಿಂತಿರುಗಿಸಲು ಸರಕಾರವು ಒಪ್ಪಿಗೆ ಸೂಚಿಸಿದ್ದು, ಅಲ್ಲದೆ, ಯೋಜನಾ ಪ್ರದೇಶದ ಒಳಭಾಗದ ಜಮೀನನ್ನು ನೀಡಲು ಪ್ರಯತ್ನಿಸುವುದಾಗಿ ತಿಳಿಸಿದೆ. ಸುಮಾರು 300 ಎಕರೆ ಜಮೀನನ್ನು ರೈತರಿಗೆ ನೀಡಲು ಸರಕಾರವು ಒಪ್ಪಿಕೊಂಡಿದೆ ಎಂಬುದಾಗಿ ತಿಳಿದುಬಂದಿದೆ.

ಸಿಂಗೂರ್ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಪಶ್ಚಿಮ ಬಂಗಾಲ ಸರಕಾರ ಮತ್ತು ಮಮತಾ ಬ್ಯಾನರ್ಜಿ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಒಪ್ಪಂದದಂತೆ ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆಯನ್ನು ಅಧಿಕೃತವಾಗಿ ಹಿಂತೆಗೆದುಕೊಳ್ಳಲಿದ್ದಾರೆ.

ಏತನ್ಮಧ್ಯೆ, ಇದೊಂದು ಪ್ರಮುಖ ಗೆಲುವು ಎಂದು ಬಣ್ಣಿಸಿರುವ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ಪ್ರತಿಭಟನಾಕಾರರ ಬೇಡಿಕೆಗಳಿಗೆ ಸರಕಾರವು ಸ್ಪಂದಿಸಿರುವುದು ಸಂತೋಷ ತಂದಿದೆ ಎಂದಿದ್ದಾರೆ.

ಸರಕಾರದೊಂದಿಗೆ ಸಹಿ ಹಾಕಿದ ಒಪ್ಪಂದದಡಿಯಲ್ಲಿ, ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ 300 ಎಕರೆ ಜಮೀನನ್ನು ಸರಕಾರವು ರೈತರಿಗೆ ಹಿಂತಿರುಗಿಸಲಿದೆ ಮತ್ತು 100 ಎಕರೆ ಜಮೀನನ್ನು ಯೋಜನಾ ಸ್ಥಾವರಕ್ಕೆ ನೀಡಲಿದೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.
ಮತ್ತಷ್ಟು
ರಾಷ್ಟ್ರದ ಹಿತಾಸಕ್ತಿಯ ಶರಣಾಗತಿ: ಕಾರಟ್
ಡೇರಾ ಸಚ್ಚಾ ಮುಖ್ಯಸ್ಥ ವಿರುದ್ಧ ಅತ್ಯಾಚಾರ ಆರೋಪ
ಅಲ್-ಬದ್ರ್ ಮುಖಂಡ ಗುಂಡಿಗೆ ಆಹುತಿ
ಇದು ಜನ್ಮಜನ್ಮದ 'ಅಣುಬಂಧ': ಪ್ರಣಬ್ ಮುಖರ್ಜಿ
ಉತ್ತರ, ಪಶ್ಚಿಮ ಭಾರತದಲ್ಲಿ ಲಘ ಕಂಪನ
ಎನ್‌ಎಸ್‌ಜಿ ಬಿಕ್ಕಟ್ಟು: ಪ್ರಧಾನಿ - ಪ್ರಣಬ್ ಭೇಟಿ