ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚು.ಆಯೋಗ ಸಭೆ: ಶ್ರೀನಗರ ಮತ್ತೆ ಉದ್ವಿಗ್ನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚು.ಆಯೋಗ ಸಭೆ: ಶ್ರೀನಗರ ಮತ್ತೆ ಉದ್ವಿಗ್ನ
ಜಮ್ಮು ಮತ್ತು ಶ್ರೀನಗರದಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಸಲುವಾಗಿ ಚುನಾವಣಾ ಆಯೋಗವು ಪ್ರಮುಖ ರಾಜಕೀಯ ಪಕ್ಷಗಳ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿ ನಾಯಕರು ನೀಡಿರುವ ಕರೆಯನ್ವಯ ಸೋಮವಾರ ಶ್ರೀನಗರದಲ್ಲಿ ಬಂದ್ ಆಚರಿಸಲಾಗುತ್ತಿದೆ.

ಪ್ರತ್ಯೇಕತಾವಾದಿ ಚಳುವಳಿ ಹೂಡಿರುವ ಹುರಿಯತ್ ಕಾನ್ಫರೆನ್ಸ್‌ನ ಎರಡು ಬಣಗಳ ಸಮನ್ವಯ ಸಮಿತಿಯ ಸದಸ್ಯರು ಹುರಿಯತ್ ನಾಯಕ ಸಯ್ಯದ್ ಅಲಿ ಶಾ ಗಿಲಾನಿ ಅವರ ನಿವಾಸದಲ್ಲಿ ಈ ವಾರದ ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ಸಭೆ ಸೇರಿದ್ದು ಈ ನಿರ್ಣಯ ಕೈಗೊಳ್ಳಲಾಗಿದೆ.

ಚುನಾವಣಾ ಆಯೋಗದ ಸಭೆಯನ್ನು ಪ್ರತಿಭಟಿಸಿ ಮತ್ತು ಶನಿವಾರ ನೌಹಟ್ಟಾ ಪ್ರದೇಶದಲ್ಲಿ ನಡೆದಿರುವ ಯುವಕನೊಬ್ಬನ ಹತ್ಯಾ ಪ್ರಕರಣವನ್ನೂ ಪ್ರತಿಭಟಿಸಿ ಮುಷ್ಕರಕ್ಕೆ ಕರೆ ನೀಡಿರುವುದಾಗಿ ಗಿಲಾನಿ ಹೇಳಿದ್ದಾರೆ. ಅಲ್ಲದೆ, ಪ್ರತ್ಯೇಕತಾ ಹೋರಾಟ ನಡೆಸುತ್ತಿರುವ ಹಿರಿಯ ನಾಯಕರನ್ನು ಬಂಧಿಸಿ ಕಾಶ್ಮೀರದ ಹೊರಗಿನ ಜೈಲುಗಳಿಗೆ ಕಳುಹಿಸುವ ಸರಕಾರದ ನಿರ್ಧಾರವನ್ನು ವಿರೋಧಿಸಿಯೂ ಈ ಪ್ರತಿಭಟನೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಮಂಗಳವಾರ, ಬುಧವಾರ ಮತ್ತು ಗುರುವಾರ ಜನತೆ ತಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸುವಂತೆ ಜನತೆಗೆ ಮನವಿ ಮಾಡಿರುವ ಗಿಲಾನಿ ಶುಕ್ರವಾರ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

ರಾಜ್ಯವು ಪ್ರಸ್ತುತ ರಾಜ್ಯಪಾಲರ ಆಳ್ವಿಕೆಯಲ್ಲಿ ಇದ್ದು, ಅಕ್ಟೋಬರ್‌ನಲ್ಲಿ ಚುನಾವಣೆ ನಡೆಸಬೇಕಾಗಿದೆ. ಅಮರನಾಥ ಭೂವಿವಾದಕ್ಕೆ ಸಂಬಂಧಿಸಿದಂತೆ ಪಿಡಿಪಿಯು ತನ್ನ ಬೆಂಬಲ ಹಿಂತೆಗೆದುಕೊಂಡ ಬಳಿಕ ಗುಲಾಂ ನಬಿ ಅಜಾದ್ ನೇತೃತ್ವದ ಸಮ್ಮಿಶ್ರ ಸರಕಾರವು ಉರುಳಿತ್ತು.
ಮತ್ತಷ್ಟು
ಸಿಂಗೂರ್ ಬಿಕ್ಕಟ್ಟು ಅಂತ್ಯ: ನ್ಯಾನೋ ಹಾದಿ ಸುಗಮ
ರಾಷ್ಟ್ರದ ಹಿತಾಸಕ್ತಿಯ ಶರಣಾಗತಿ: ಕಾರಟ್
ಡೇರಾ ಸಚ್ಚಾ ಮುಖ್ಯಸ್ಥ ವಿರುದ್ಧ ಅತ್ಯಾಚಾರ ಆರೋಪ
ಅಲ್-ಬದ್ರ್ ಮುಖಂಡ ಗುಂಡಿಗೆ ಆಹುತಿ
ಇದು ಜನ್ಮಜನ್ಮದ 'ಅಣುಬಂಧ': ಪ್ರಣಬ್ ಮುಖರ್ಜಿ
ಉತ್ತರ, ಪಶ್ಚಿಮ ಭಾರತದಲ್ಲಿ ಲಘ ಕಂಪನ