ಎರಡು ಸೀಟರ್ ಸೆನ್ನಾ ವಿಮಾನವು ಸೋಮವಾರ ಹೈದರಾಬಾದಿನಲ್ಲಿ ಅಪಘಾತಕ್ಕೀಡಾಗಿದ್ದು, ಪೈಲಟ್ ಹಾಗೂ ತರಬೇತುದಾರರಿಬ್ಬರೂ ಸಾವನ್ನಪ್ಪಿದ್ದಾರೆ.
ಸೆಸ್ನಾ 152 ವಿಮಾನವು ಸನತ್ ನಗರದ ಪಶ್ಚಿಮ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಬೇಗಂಪೇಟ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದತಕ್ಷಣ ಈ ದುರಂತ ಸಂಭವಿಸಿದೆ. ವಿಮಾನವು ಆಂಧ್ರಪ್ರದೇಶ ಏವಿಯೇಶನ್ ಅಕಾಡೆಮಿಗೆ ಸಂಬಂಧಿಸಿದಾಗಿದೆ.
ವಸತಿ ಪ್ರದೇಶದ ವಿದ್ಯುತ್ ಕಂಬವೊಂದಕ್ಕೆ ವಿಮಾನ ಢಿಕ್ಕಿ ಹೊಡೆದಿದ್ದು, ಆ ಪ್ರದೇಶದ ವ್ಯಕ್ತಿಯೊಬ್ಬ ಕೂಡ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ವಿಮಾನವು ಕಂಬಕ್ಕೆ ಢಿಕ್ಕಿ ಹೊಡೆದ ತಕ್ಷದ ವಿಮಾನದಲ್ಲಿ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ತರಬೇತಿ ಪಡೆಯುತ್ತಿದ್ದ ಶ್ರೀನಿವಾಸ್ ಸ್ಥಳದಲ್ಲೇ ಸಾವನ್ನಪ್ಪಿದರೆ, ತರಬೇತುದಾರ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತರಾದರು.
ಇದು ಸ್ಪಷ್ಟವಾಗಿ ಮಾನವ ತಪ್ಪಾಗಿದ್ದು ತಾಂತ್ರಿಕ ದೋಷ ಅಪಘಾತಕ್ಕೆ ಕಾರಣವಲ್ಲ ಎಂದು ಆಂಧ್ರಪ್ರದೇಶ ವಾಯುಯಾನ ಅಕಾಡೆಮಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಎನ್.ರೆಡ್ಡಿ ಹೇಳಿದ್ದಾರೆ.
|