ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮರಾಠಿ ವಿರೋಧಿ ಹೇಳಿಕೆ: ಜಯಾ ಬಚ್ಚನ್ ಕ್ಷಮೆ ಯಾಚನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮರಾಠಿ ವಿರೋಧಿ ಹೇಳಿಕೆ: ಜಯಾ ಬಚ್ಚನ್ ಕ್ಷಮೆ ಯಾಚನೆ
ಮಹಾರಾಷ್ಟ್ರದ ಜನತೆಗೆ ನೋವುಂಟುಮಾಡುವ ಉದ್ದೇಶವನ್ನು ತಾನು ಹೊಂದಿಲ್ಲ ಎಂದು ಹೇಳುವ ಮೂಲಕ ಮರಾಠಿ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದ ಜಯಾ ಬಚ್ಚನ್ ಕ್ಷಮೆ ಯಾಚಿಸಿದ್ದಾರೆ.

ಮಹಾರಾಷ್ಟ್ರ ಜನತೆಗೆ ತನ್ನಿಂದ ನೋವಾಗಿದ್ದರೆ ಕ್ಷಮಿಸಬೇಕೆಂದು ಜಯಾ ಬಚ್ಚನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ತಾನು ಮುಂಬಯಿ ಅಥವಾ ಮುಂಬಯಿ ಜನರನ್ನು ಅವಮಾನಿಸಲು ಸಾಧ್ಯವೇ ಇಲ್ಲ, ಯಾಕೆಂದರೆ ಮುಂಬಯಿ ತನಗೆ ಎಲ್ಲವನ್ನೂ ನೀಡಿದೆ ಎಂದು ಜಯಾಬಚ್ಚನ್ ಹೇಳಿರುವುದಾಗಿ ವರದಿಗಳು ತಿಳಿಸಿವೆ.

ಜಯಾ ಬಚ್ಚನ್ ಅವರು ಮರಾಠಿ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯು. ಬಚ್ಚನ್ ಕ್ಷಮೆ ಯಾಚಿಸುವವರೆಗೂ ಬಚ್ಚನ್ ಕುಟುಂಬದವರ ಯಾವುದೇ ಚಿತ್ರವನ್ನು ಮಹಾರಾಷ್ಟ್ರದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಹೇಳಿತ್ತು.

ತಾನು ಉತ್ತರ ಭಾರತದವಳಾದ್ದರಿಂದ ತಾನು ಹಿಂದಿ ಮಾತನಾಡುತ್ತೇನೆ, ಇದಕ್ಕಾಗಿ ಮಹಾರಾಷ್ಟ್ರದವರು ನನ್ನನ್ನು ಕ್ಷಮಿಸಬೇಕು ಎಂದು ಮುಂಬಯಿಯ ಸಿನಿಮಾ ಸಮಾರಂಭವೊಂದರಲ್ಲಿ ಜಯಾ ಬಚ್ಚನ್ ಹೇಳಿರುವುದು ವಿವಾದಕ್ಕೆ ಕಾರಣವಾಗಿತ್ತು.
ಮತ್ತಷ್ಟು
ಜಯಾ ಕ್ಷಮೆ ಕೇಳದಿದ್ದರೆ ಬಚ್ಚನ್ ಚಿತ್ರ ಬಿಡುಗಡೆಗೆ ತಡೆ: ರಾಜ್ ಠಾಕ್ರೆ
ಹೈದರಾಬಾದ್: ತರಬೇತಿ ವಿಮಾನ ಅಪಘಾತ, 2 ಸಾವು
ಕಾಂಗ್ರೆಸ್-ಎಸ್ಪಿ ನಡುವೆ ಸ್ಥಾನ ಹಂಚಿಕೆ ಮಾತುಕತೆ
ತ.ನಾ: ಸೆ.15ಕ್ಕೆ 1ರೂ. ಅಕ್ಕಿ ಯೋಜನೆ ಅನಾವರಣ
ಕೋಲ್ಕತಾ ಹೈ.ಕೋ ನ್ಯಾಯಾಧೀಶರಿಗೆ ವಾಗ್ದಂಡನೆ
ಇಶ್ಮಿತ್ ಸಾವು ಸಿಬಿಐ ತನಿಖೆಗೆ ಒತ್ತಾಯ