ಭಾರತ ಮತ್ತು ಅಮೆರಿಕ ನಡುವಣ ಅಣು ಒಪ್ಪಂದದಂತಹ ವ್ಯವಹಾರಕ್ಕಾಗಿ ಮಾತುಕತೆ ನಡೆಸಲು ಪಾಕಿಸ್ತಾನದ ನೂತನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಚೀನಕ್ಕೆ ತೆರಳಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿರುವಂತೆ, ಸೈನೊ-ಪಾಕ್ ಅಣುಒಪ್ಪಂದ ಸಾಧ್ಯವಿಲ್ಲ ಎಂಬ ವಿಶ್ವಾಸವನ್ನು ಭಾರತ ಹೊಂದಿರುವುದಾಗಿ ಮೂಲಗಳು ತಿಳಿಸಿವೆ.
ಅಣ್ವಸ್ತ್ರ ಪ್ರಸರಣ ನಿಷೇಧ ಕುರಿತ ಪಾಕಿಸ್ತಾನದ ದುರ್ಬಲ ಚರಿತ್ರೆಯು ಈ ಕುರಿತಂತೆ ಎನ್ಎಸ್‌ಜಿ ಆಥವಾ ಐಎಇಎಯಿಂದ ಒಪ್ಪಿಗೆ ಪಡೆಯಲು ಅಡ್ಡಿಯಾಗಬಹುದು, ಅಲ್ಲದೆ, ಅಣು ವಿಜ್ಞಾನಿ ಎ.ಕ್ಯೂ.ಖಾನ್ ಅವರ ಇತಿಹಾಸವೂ ಇದಕ್ಕೆ ಧಕ್ಕೆಯಾಗಲಿದೆ ಎಂದು ಮೂಲಗಳು ಹೇಳಿವೆ.
ಪಾಕಿಸ್ತಾನವು ಇದೀಗಾಗಲೇ ಚೀನಾ ಸಂಪರ್ಕದಲ್ಲಿದ್ದು, ತನ್ನ ಇಂಧನ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಜರ್ದಾರಿಯವರ ಭೇಟಿಯ ವೇಳೆ ಅಣುಒಪ್ಪಂದ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ಅನಾಮಧೇಯವಾಗಿ ಉಳಿಯಲು ಬಯಸಿರುವ ಪಾಕಿಸ್ತಾನದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಸ್ತಾಪಿತ ಒಪ್ಪಂದದಂತೆ, ಚೀನವು ಪಾಕಿಸ್ತಾನಕ್ಕೆ ಪರಮಾಣು ಸಾಮಾಗ್ರಿಗಳನ್ನು ಪೂರೈಸಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
|