ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗುಜರಾತ್: ಪರೀಕ್ಷೆ ವೇಳೆ ಪುಸ್ತಕ ಒಯ್ಯಲು ವಿದ್ಯಾರ್ಥಿಗಳಿಗೆ ಅವಕಾಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತ್: ಪರೀಕ್ಷೆ ವೇಳೆ ಪುಸ್ತಕ ಒಯ್ಯಲು ವಿದ್ಯಾರ್ಥಿಗಳಿಗೆ ಅವಕಾಶ
ND
ಒಂದೊಮ್ಮೆ ಗುಜರಾತ್ ರಾಜ್ಯದ ಶಿಕ್ಷಣ ಇಲಾಖೆಯು ತನ್ನ ನಿರ್ಧಾರದಂತೆ ಮುಂದುವರಿದರೆ, 8, 9 ಮತ್ತು ಹತ್ತನೆ ತರಗತಿಯ ಸುಮಾರು ಮಿಲಿಯಗಟ್ಟಲೆ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಪುಸ್ತಕ ಕೊಂಡೊಯ್ಯಲಿದ್ದಾರೆ.

ಗುಜರಾತಿನ ಪ್ರೌಢಶಿಕ್ಷಣ ಮಂಡಳಿಯು ಈ ಕುರಿತು ಸರಕಾರಕ್ಕೆ ಪ್ರಸ್ತಾಪವೊಂದನ್ನು ಕಳುಹಿಸಿದೆ. ಇದಕ್ಕೆ ಸರಕಾರವೇನಾದರೂ ಒಪ್ಪಿದಲ್ಲಿ, 2008-09ರ ಪರೀಕ್ಷೆಯಲ್ಲಿ ಮೂರು ಪಂಗಡದ ವಿದ್ಯಾರ್ಥಿಗಳು ಪುಸ್ತಕ ನೋಡಿ ಪರೀಕ್ಷೆ ಬರೆಯಲಿದ್ದಾರೆ. ಗಣಿತ-ವಿಜ್ಞಾನ-ಸಮಾಜ, ಗುಜರಾತಿ-ಸಂಸ್ಕೃತ-ಇಂಗ್ಲೀಷ್ ಮತ್ತು ದೈಹಿಕ ಶಿಕ್ಷಣ-ಚಿತ್ರಕಲೆ-ಸಂಗೀತ-ಕಂಪ್ಯೂಟರ್ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಪುಸ್ತಕ ಒಯ್ಯಬಹುದಾಗಿದೆ.

ಶಿಕ್ಷಣ ಮತ್ತು ಪರೀಕ್ಷಾ ಸಮಿತಿಗಳ ಕಾರ್ಯಕಾರಿ ಸಮಿತಿಯ ಅಂಗೀಕಾರದ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಮಂಡಳಿಯ ಆರ್.ಕೆ.ಪಾಠಕ್ ಹೇಳಿದ್ದಾರೆ.
ಮತ್ತಷ್ಟು
ಚೀನ-ಪಾಕ್ ಅಣುವ್ಯವಹಾರ ಸಾಧ್ಯವಿಲ್ಲ: ಭಾರತ
ಮರಾಠಿ ವಿರೋಧಿ ಹೇಳಿಕೆ: ಜಯಾ ಬಚ್ಚನ್ ಕ್ಷಮೆ ಯಾಚನೆ
ಜಯಾ ಕ್ಷಮೆ ಕೇಳದಿದ್ದರೆ ಬಚ್ಚನ್ ಚಿತ್ರ ಬಿಡುಗಡೆಗೆ ತಡೆ: ರಾಜ್ ಠಾಕ್ರೆ
ಹೈದರಾಬಾದ್: ತರಬೇತಿ ವಿಮಾನ ಅಪಘಾತ, 2 ಸಾವು
ಕಾಂಗ್ರೆಸ್-ಎಸ್ಪಿ ನಡುವೆ ಸ್ಥಾನ ಹಂಚಿಕೆ ಮಾತುಕತೆ
ತ.ನಾ: ಸೆ.15ಕ್ಕೆ 1ರೂ. ಅಕ್ಕಿ ಯೋಜನೆ ಅನಾವರಣ