ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹಾಗಾದರೆ ಅರುಷಿಯನ್ನು ಕೊಂದವರಾರು?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಾಗಾದರೆ ಅರುಷಿಯನ್ನು ಕೊಂದವರಾರು?
PTI
ನೋಯ್ಡಾ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ರಚನಾತ್ಮಕ ಪುರಾವೆ ಲಭಿಸಿಲ್ಲ ಎಂದು ಮಂಗಳಾರ ನುಡಿದಿರುವ ಸಿಬಿಐ, ಪ್ರಕರಣದ ಕುರಿತಂತೆ ಸದ್ಯ ದೋಷಾರೋಪಣೆ ಪಟ್ಟಿ ಸಲ್ಲಿಸುವಂತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.

ಚಾರ್ಜ್‌ಶೀಟ್ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ತನಿಖೆ ಸಂಪೂರ್ಣಗೊಂಡ ಬಳಿಕವಷ್ಟೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಸಿಬಿಐ ಅಧಿಕಾರಿ ತಿಳಿಸಿದರು. ಕೊಲೆಗೆ ಬಳಸಲಾಗಿರುವ ಆಯುಧವನ್ನು ಇನ್ನೂ ಸಿಬಿಐ ಹುಡುಕುತ್ತಿದ್ದು, ಈ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.

ಏತನ್ಮಧ್ಯೆ, ಪ್ರಕರಣದ ಆರೋಪಿ ರಾಜ್‌ಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸಿಬಿಐ ತಿರಸ್ಕರಿಸಿದೆ. ಜೂನ್ ಒಂದರಂದು ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದೆಯಾದರೂ, ಕೊಲೆಗಾರನ್ಯಾರು ಎಂಬುದನ್ನು ಇನ್ನೂ ಭೇದಿಸಲಾಗಿಲ್ಲ.

ಸಿಬಿಐ ತನಿಖೆಯ ಬಳಿಕ ಅರುಷಿಯ ತಂದೆ ದಂತವೈದ್ಯ ರಾಜೇಶ್ ತಲ್ವಾರ್ ಅವರ ಕ್ಲಿನಿಕ್‌ನಲ್ಲಿ ಕಾಂಪೋಡರ್ ಆಗಿದ್ದ ಕೃಷ್ಣ, ತಲ್ವಾರ್ ಅವರ ನೆರೆಮನೆಯ ಕೆಲಸದಾಳು ರಾಜ್‌ಕುಮಾರ್ ಮತ್ತು ಇನ್ನೋರ್ವ ಆಳು ವಿಜಯ್ ಮಂಡಲ್ ಎಂಬವರನ್ನು ಬಂಧಿಸಿದೆಯಾದರೂ, ಇದುವರೆಗೂ ಅಂತಿಮ ಅನ್ನಿಸುವಂತಹ ಫಲಿತಾಂಶಗಳು ಹೊರಬಿದ್ದಿಲ್ಲ.

ಹದಿನಾಲ್ಕರ ಹರೆಯದ ಅರುಷಿಯನ್ನು ಗಂಟಲು ಸೀಳಿ ಕೊಲೆಮಾಡಲಾಗಿದ್ದು, ಆಕೆಯ ಮೃತದೇಹ ಮೇ 16ರಂದು ಪತ್ತೆಯಾಗಿತ್ತು. ಈಕೆಯನ್ನು ಮನೆಗೆಲಸದಾಳು ಹೇಮರಾಜ್ ಕೊಲೆಗೈದಿರಬೇಕೆಂದು ಸಂಶಯಿಸಲಾಗಿತ್ತಾದರೂ, ಆತನ ಮೃತದೇಹ ಮನೆಯ ಟೆರೇಸ್‌ನಲ್ಲಿ ಮರುದಿನ ಪತ್ತೆಯಾಗಿತ್ತು. ಈ ಜೋಡಿ ಕೊಲೆ ಪ್ರಕರಣ ಅನೇಕ ತಿರುವುಗಳನ್ನು ಪಡೆದುಕೊಂಡು ಅರುಷಿಯ ತಂದೆ ರಾಜೇಶ್ ಅವರನ್ನೂ ಸಂಶಯಿಸಲಾಗಿದ್ದು ಸುಮಾರು ಎರಡು ತಿಂಗಳ ಕಾಲ ಅವರು ಪೊಲೀಸರ ವಶದಲ್ಲಿದ್ದು, ಬಳಿಕ ಬಿಡುಗಡೆಗೊಂಡಿದ್ದರು.
ಮತ್ತಷ್ಟು
ಪಿಟೀಲು ಮಾಂತ್ರಿಕ ಕುನ್ನಕುಡಿ ವೈದ್ಯನಾಥನ್ ಇನ್ನಿಲ್ಲ
ವಿಹಿಂಪ ಮುಖಂಡನ ಹತ್ಯೆ ತಮ್ಮ ಕೃತ್ಯವೆಂದ ನಕ್ಸಲರು
ಗುಜರಾತ್: ಪರೀಕ್ಷೆ ವೇಳೆ ಪುಸ್ತಕ ಒಯ್ಯಲು ವಿದ್ಯಾರ್ಥಿಗಳಿಗೆ ಅವಕಾಶ
ಚೀನ-ಪಾಕ್ ಅಣುವ್ಯವಹಾರ ಸಾಧ್ಯವಿಲ್ಲ: ಭಾರತ
ಮರಾಠಿ ವಿರೋಧಿ ಹೇಳಿಕೆ: ಜಯಾ ಬಚ್ಚನ್ ಕ್ಷಮೆ ಯಾಚನೆ
ಜಯಾ ಕ್ಷಮೆ ಕೇಳದಿದ್ದರೆ ಬಚ್ಚನ್ ಚಿತ್ರ ಬಿಡುಗಡೆಗೆ ತಡೆ: ರಾಜ್ ಠಾಕ್ರೆ