ಬ್ರಹ್ಮಾಂಡ ಸೃಷ್ಟಿಯಾಗಿದ್ದು ಹೇಗೆ ಎಂಬುದನ್ನು ಪುನರಾವರ್ತಿಸುವ ಮಹಾ ಪ್ರಯೋಗವೊಂದು ಜಿನೇವಾದಲ್ಲಿ ಬುಧವಾರ ಮಧ್ಯಾಹ್ನ ನಡೆದಿದ್ದು, ಭೂಮಿಯ ಸೃಷ್ಟಿಯ ರಹಸ್ಯ ಅರಿಯುವಲ್ಲಿ ಅಣುಭೌತಶಾಸ್ತ್ರ ವಿಜ್ಞಾನಿಗಳಿಗೆ ಇದೊಂದು ಮಹತ್ತರ ಸಂಶೋಧನೆಯಾಗಲಿದೆ.
ಭಾರತೀಯರಲ್ಲಿ ಇದನ್ನು ಅತ್ಯಂತ ಸಮೀಪದಿಂದ ವೀಕ್ಷಿಸುವ ಭಾಗ್ಯ ಜೈಪುರದ ಭೌತವಿಜ್ಞಾನಿಗಳಾದ ರಾನಿವಾಲ ದಂಪತಿಗಳದು. ಇದು ಮಾನವ ಇತಿಹಾಸದಲ್ಲೇ ಅತಿದೊಡ್ಡದಾದ ಪ್ರಯೋಗವಾಗಿದೆ.
ಭಾರತದ 30 ವಿಶೇಷ ಭೌತವಿಜ್ಞಾನಿಗಳ ತಂಡದಲ್ಲಿ ರಾಜಸ್ಥಾನ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್‌ಗಳಾದ ಸುಧೀರ್ ರಾನಿವಾಲ ಮತ್ತು ಅವರ ಪತ್ನಿ ರಶ್ಮಿ ರಾನಿವಾಲ ಅವರೂ ಸೇರಿದ್ದು, ಈ ಮಹಾನ್ ಪ್ರಯೋಗದ ಭಾಗವಾಗಿದ್ದಾರೆ.
4.4 ಶತಕೋಟಿ ಡಾಲರ್ ವೆಚ್ಚದಲ್ಲಿ ಲಾರ್ಜ್ ಹೆಡ್ರಾನ್ ಕೊಲ್ಲಯ್ಡರ್(ಎಲ್ಎಚ್‌ಸಿ) ಎಂಬ ಘಟಸ್ಫೋಟಕವನ್ನು ನಿರ್ಮಿಸಲಾಗಿದೆ. ಇದು ಜಿನೇವಾದಲ್ಲಿರುವ ಯುರೋಪ್‌ನ ಅಣು ಸಂಶೋಧನಾ ಕೇಂದ್ರದಲ್ಲಿ ನಿರ್ಮಿಸಲಾಗಿರುವ ಅತಿಹೆಚ್ಚು ಶಕ್ತಿಯ ವೇಗವರ್ಧಕಗಳ ನಿರ್ಮಾಣ ಸರಣಿಯಲ್ಲಿ ಇತ್ತೀಚಿನದು.
ಎಲ್ಎಚ್‌ಸಿಯ ವೃತ್ತಾಕಾರದ ಸುರಂಗದೊಳಗೆ 27 ಕಿಮಿ ಪರಿಧಿಯೊಳಗೆ ಪ್ರೊಟೋನ್‌ಗಳ ವಿಕಿರಣವನ್ನು ಶೇ.99.999999 ಜ್ಯೋತಿರ್ವರ್ಷ ವೇಗದಲ್ಲಿ ಹಾಯಿಸಲಾಗುವುದು. ಅವುಗಳನ್ನು ಜತೆಯಲ್ಲಿ ಘರ್ಷಿಸಿದಾಗ, ಭೂಮಿಸೃಷ್ಟಿಯ ಮಹಾಸ್ಫೋಟದ ವೇಳೆಯ ಟ್ರಿಲಿಯನ್ ಸೆಕೆಂಡಿನ ಒಂದನೇ ಅವಧಿಯಲ್ಲಿ ಭಾಸವಾಗಿರುವಂತ ಇಂಧನ ಶಕ್ತಿಯನ್ನು ಉತ್ಪಾದಿಸುತ್ತದೆಯಂತೆ.
ಎಲ್ಎಚ್‌ಸಿಯಲ್ಲಿ ಫೋಟೋನ್ ಮಲ್ಟಿಪ್ಲಿಸಿಟಿ ಡಿಟೆಕ್ಟರ್ ಅನ್ನು ಅಳವಡಿಸಲಾಗಿದ್ದು, ಇದರಲ್ಲಿನ ಪ್ರೋಟಾನ್‌ಗಳ ವೇಗವನ್ನು ವರ್ಧಿಸಲಾಗುತ್ತದೆ ಮತ್ತು ಮಾನವ ಇದುವರೆಗೆ ನಿರ್ಮಿಸಿಯೇ ಇರದಂತಹ ವೇಗದಲ್ಲಿ ಚಲಿಸುತ್ತದೆ ಎಂದು ರಾನಿವಾಲ ಅವರು ಹೇಳಿದ್ದಾರೆ. ರಾನಿವಾಲ ಮತ್ತು ಇತರ ಭಾರತೀಯ ವಿಜ್ಞಾನಿಗಳು ವಿನ್ಯಾಸಗೊಳಿಸಿದ ಈ ಪಿಎಂಡಿಯಿಂದ ತಜ್ಞರು ಕ್ವಾರ್ಕ್ ಗ್ಲುವಾನ್ ಪ್ಲಾಸ್ಮಾವನ್ನು ಉತ್ಪಾದಿಸಲು ಪ್ರಯತ್ನಿಸಲಿದ್ದಾರೆ. ಈ ಪ್ಲಾಸ್ಮಾವು ಭೂಮಿಯ ಸೃಷ್ಟಿಯ ವೇಳೆ ಅಸ್ತಿತ್ವದಲ್ಲಿತ್ತು.
|